Select Your Language

Notifications

webdunia
webdunia
webdunia
webdunia

ಪುತ್ರನನ್ನು ಅಪಹರಿಸಿ ಮಹಿಳೆಗೆ ಹಣಕ್ಕಾಗಿ ಬೇಡಿಕೆ ಇಟ್ಟ ಅಪ್ಪ-ಮಕ್ಕಳು

ಅಪಹರಣ
ಬೆಂಗಳೂರು , ಮಂಗಳವಾರ, 8 ಮಾರ್ಚ್ 2022 (10:51 IST)
ಬೆಂಗಳೂರು: ಸಾಲ ಕೇಳಿದಾಗ ಹಣ ಕೊಡಲಿಲ್ಲವೆಂದು ಮಹಿಳೆಯ ಪುತ್ರನನ್ನು ಅಪ್ಪ-ಮಕ್ಕಳ ಜೋಡಿ ಅಪಹರಿಸಿ ಹಣಕ್ಕಾಗಿ ಬೇಡಿಕೆಯಿಟ್ಟ ಘಟನೆ ನಡೆದಿದೆ.

ಶಾಂತಾ ಎಂಬವರು ಪತಿ ನಿಧನರಾದ ಬಳಿಕ ಕೆಲವು ಸಮಯದಿಂದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಅವರ ನಿವೇಶನವೊಂದನ್ನು ಮಾರಲು ಹೊರಟಿದ್ದರು. ಇದನ್ನು ಮಾರಿಸಿ ಕೊಡುತ್ತೇನೆ, ಕಮಿಷನ್ ಹಣವನ್ನು ಸಾಲವಾಗಿ ಕೊಡಿ ಎಂದು ಕುಟುಂಬಕ್ಕೆ ಹತ್ತಿರದವರಾಗಿದ್ದ ರವಿ ಎಂಬಾತ ಬೇಡಿಕೆಯಿಟ್ಟಿದ್ದ. ಆದರೆ ಶಾಂತಾ ಒಪ್ಪಿರಲಿಲ್ಲ.

ಹೀಗಾಗಿ ಆಕ್ರೋಶಗೊಂಡ ಆರೋಪಿ ರವಿ ತನ್ನ ಇಬ್ಬರು ಮಕ್ಕಳ ಸಹಾಯದಿಂದ ಶಾಂತಾ ಅವರ ಮಗನನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ಇದೀಗ ಮೂವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಕ್ಕು ಕಚ್ಚಿ ಮಹಿಳೆಯರು ಸಾವು