Publish Date: Mon, 07 Mar 2022 (09:50 IST)
Updated Date: Mon, 07 Mar 2022 (10:07 IST)
ಬೆಳಗಾವಿ: ಪತ್ನಿ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಕ್ಕೆ ಸ್ನೇಹಿತನನ್ನು ಕೊಂದ ವ್ಯಕ್ತಿ ಆತನ ಮೃತದೇಹವನ್ನು ಭತ್ತ ಬೇಯಿಸುವ ಬಣವೆಯಲ್ಲಿಟ್ಟು ಸುಟ್ಟು ಹಾಕಿದ್ದಾನೆ!
ಕೊಲೆಗೀಡಾದ ಸಂತೋಷ್ ಎಂಬಾತನ ಪತ್ನಿ ಮತ್ತು ಆರೋಪಿ ಪರಶುರಾಮ್ ನಡುವೆ ಅನೈತಿಕ ಸಂಬಂಧವಿತ್ತು. ಇದನ್ನು ಸಂತೋಷ್ ಪ್ರಶ್ನಿಸಿದ್ದ. ಮೊನ್ನೆಯಷ್ಟೇ ಸ್ನೇಹಿತನನ್ನು ಪುಸಲಾಯಿಸಿ ಗದ್ದೆಗೆ ಕರೆದುಕೊಂಡು ಹೋಗಿದ್ದ ಪರಶುರಾಮ್ ಮದ್ಯಪಾನ ಮಾಡಿಸಿ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಬಳಿಕ ಮೃತದೇಹವನ್ನು ಭತ್ತ ಬೇಯಿಸುವ ಬಣವೆಯಲ್ಲಿ ಸುಟ್ಟು ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿತ್ತು. ಹೀಗಾಗಿ ಪೊಲೀಸರು ಆರೋಪಿಯನ್ನು ಸೆರೆಹಿಡಿಯಲು ಸಹಕಾರಿಯಾಯಿತು.