Publish Date: Sun, 06 Mar 2022 (10:22 IST)
Updated Date: Sun, 06 Mar 2022 (10:23 IST)
ಬೆಳಗಾವಿ: ಇಬ್ಬರನ್ನು ಬಿಟ್ಟು ಮೂರನೆಯವಳಿಗೆ ಗಂಟು ಹಾಕಿದ್ದ ಪತಿ ಕೊನೆಗೆ ಆಕೆಯಿಂದಲೇ ಬರ್ಬರವಾಗಿ ಹತ್ಯೆಯಾದ ಘಟನೆ ನಡೆದಿದೆ.
ಈ ಸಂಬಂಧ ಮಹಿಳೆ ಮತ್ತು ಆಕೆಯ ಪುತ್ರ, ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 26 ರಂದು ರಾತ್ರಿ ಪತಿಯ ಕುತ್ತಿಗೆಗೆ ಸೀಳಿ ಪತ್ನಿ ಹತ್ಯೆ ಮಾಡಿದ್ದಳು.
ಪತಿ ಬೇಕರಿ ಬ್ಯುಸಿನೆಸ್ ಮಾಡುತ್ತಿದ್ದ. ಆದರೆ ಇತ್ತೀಚೆಗೆ ನಷ್ಟವಾಗಿದ್ದ ಕಾರಣಕ್ಕೆ ಮನೆ ಮಾರಿ ಸಾಲ ತೀರಿಸಲು ಪತ್ನಿ ಬಳಿ ಒತ್ತಾಯಿಸುತ್ತಿದ್ದ. ಆದರೆ ಪತ್ನಿ ಇದಕ್ಕೆ ಒಪ್ಪಿರಲಿಲ್ಲ. ಈ ವಿಚಾರವಾಗಿ ದಂಪತಿ ನಡುವೆ ವೈಮನಸ್ಯವಿತ್ತು. ಇದೇ ಕಾರಣಕ್ಕೆ ಪತ್ನಿ ಪತಿಯ ಹತ್ಯೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.