Publish Date: Sun, 06 Mar 2022 (09:10 IST)
Updated Date: Sun, 06 Mar 2022 (09:26 IST)
ಮುಂಬೈ: ಬೀದಿ ನಾಯಿಯನ್ನು ಮನೆಯೊಳಗೆ ಎಳೆದೊಯ್ದು ಕಾಮತೃಷೆ ತೀರಿಸಿಕೊಂಡ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ರಿಜ್ವಾನ್ ಎಂಬ ಆರೋಪಿ ತನ್ನ ಮನೆಯೆದುರಿನ ಬೀದಿನಾಯಿಗಳಲ್ಲೊಂದನ್ನು ಬಲವಂತವಾಗಿ ಮನೆಯೊಳಗೆ ಎಳೆದೊಯ್ದಿದ್ದ. ಬಳಿಕ ಕಾಮತೃಷೆ ತೀರಿಸಿಕೊಂಡು ರಸ್ತೆ ಬದಿ ಬಿಟ್ಟಿದ್ದ. ಈತ ಮನೆಯೊಳಗೆ ನಾಯಿಯನ್ನು ಕರೆದುಕೊಂಡು ಹೋದಾಗ ಇತರ ನಾಯಿಗಳು ಜೋರಾಗಿ ಬೊಗಳುತ್ತಿದ್ದವು.
ಇದರಿಂದ ಅನುಮಾನಗೊಂಡ ಸಾಮಾಜಿಕ ಕಾರ್ಯಕರ್ತರೊಬ್ಬರು ಆತ ರಸ್ತೆಗೆ ಬಿಟ್ಟ ನಾಯಿಯನ್ನು ಪಶು ವೈದ್ಯರ ಬಳಿ ತೆಗೆದುಕೊಂಡು ಹೋಗಿದ್ದರು. ಆಗ ನಾಯಿ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ. ಅದರಂತೆ ಅವರು ಪೊಲೀಸರಿಗೆ ದೂರು ನೀಡಿದ್ದರು.