Publish Date: Sun, 06 Mar 2022 (09:20 IST)
Updated Date: Sun, 06 Mar 2022 (09:30 IST)
ಬೆಂಗಳೂರು: ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದಾಗ ಸಿಕ್ಕಿಬಿದ್ದು ಡಿಬಾರ್ ಮಾಡಿದ್ದಕ್ಕೆ ನಗರದ ಕಾಲೇಜೊಂದರ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
21 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಾಕೆ. ಈಕೆ ಬಿಕಾಂ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆ ಬರೆಯುತ್ತಿದ್ದಾಗ ಕಾಪಿ ಮಾಡಿದ್ದಕ್ಕೆ ಕಾಲೇಜು ಆಡಳಿತ ಮಂಡಳಿ ಡಿಬಾರ್ ಮಾಡಿದೆ.
ಈ ಬಗ್ಗೆ ತನ್ನ ಸಹೋದರಿಗೆ ಕರೆ ಮಾಡಿದ್ದ ಯುವತಿ ನನ್ನನ್ನು ಡಿಬಾರ್ ಮಾಡಿದ್ದಾರೆ. ನಾನಿನ್ನು ಬದುಕಲ್ಲ ಎಂದಿದ್ದಳು. ಗಾಬರಿಗೊಂಡ ಸಹೋದರಿ ತಂದೆಗೆ ವಿಷಯ ತಿಳಿಸಿದ್ದಾಳೆ. ಆದರೆ ಅಷ್ಟರಲ್ಲಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಳು.