Select Your Language

Notifications

webdunia
webdunia
webdunia
webdunia

ನನ್ನ ಟೀಚರ್ ಅರೆಸ್ಟ್ ಮಾಡಿ! ಪೊಲೀಸ್ ಠಾಣೆಗೆ ಬಂದು ರಚ್ಚೆ ಹಿಡಿದ ಮಗು!

ನನ್ನ ಟೀಚರ್ ಅರೆಸ್ಟ್ ಮಾಡಿ! ಪೊಲೀಸ್ ಠಾಣೆಗೆ ಬಂದು ರಚ್ಚೆ ಹಿಡಿದ ಮಗು!
ಹೈದರಾಬಾದ್ , ಸೋಮವಾರ, 7 ಮಾರ್ಚ್ 2022 (08:40 IST)
ಹೈದರಾಬಾದ್: ನನ್ನ ಟೀಚರ್ ನನಗೆ ಹೊಡೆದಿದ್ದಾರೆ. ಅದಕ್ಕೆ ಅವರನ್ನು ಅರೆಸ್ಟ್ ಮಾಡಿ ಎಂದು 2 ನೇ ತರಗತಿಯಲ್ಲಿ ಓದುತ್ತಿರುವ ಪುಟಾಣಿಯೊಬ್ಬ ಪೊಲೀಸ್ ಠಾಣೆಗೆ ಬಂದು ರಚ್ಚೆ ಹಿಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಪುಟಾಣಿ ಹುಡುಗನೊಬ್ಬ ಪೊಲೀಸ್ ಠಾಣೆಗೆ ಬಂದು ಅಲ್ಲಿನ ಮಹಿಳಾ ಅಧಿಕಾರಿಯ ಬಳಿ ತನ್ನ ಟೀಚರ್ ಮೇಲೆ ದೂರಿದ್ದ. ಅವರು ನನಗೆ ಹೊಡೆದಿದ್ದಾರೆ. ಅವರನ್ನು ಅರೆಸ್ಟ್ ಮಾಡಿ ಎಂದು ಒತ್ತಾಯ ಮಾಡಿದ್ದ.

ಹುಡುಗನ ದೂರು ಕೇಳಿ ಶಾಕ್ ಆದ ಪೊಲೀಸ್ ಅಧಿಕಾರಿ ಟೀಚರ್ ಯಾಕೆ ಹೊಡೆದಿದ್ದಾರೆಂದು ಕೇಳಿದ್ದಾರೆ. ಇದಕ್ಕೆ ಆತ ನಾನು ಸರಿಯಾಗಿ ಓದುತ್ತಿಲ್ಲ ಎಂದು ಹೊಡೆದಿದ್ದಾರೆ. ಕ್ಲಾಸ್ ನಲ್ಲಿ ಬೇರೆ ಯಾರಿಗೂ ಹೊಡೆದಿಲ್ಲ ನನಗೆ ಮಾತ್ರ ಹೊಡೆದಿದ್ದಾರೆ ಎಂದು ದೂರಿದ್ದಾನೆ. ಸರಿ, ನಿನ್ನ ಸ್ಕೂಲ್ ತೋರಿಸು ನಾನೇ ಟೀಚರ್ ಹತ್ರ ಮಾತನಾಡುತ್ತೇನೆಂದು ಅಧಿಕಾರಿ ಹೇಳಿದರೂ ಆತ ಒಪ್ಪಲಿಲ್ಲ. ಒಂದೇ ಸಮ ಟೀಚರ್ ಅರೆಸ್ಟ್ ಮಾಡಿ ಎಂದು ರಚ್ಚೆ ಹಿಡಿದಿದ್ದ. ಕೊನೆಗೆ ಪೊಲೀಸರು ಬಾಲಕನನ್ನು ಸಮಾಲೋಚಕರ ಬಳಿಕ ಕರೆದೊಯ್ದು ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಪ್ರಿಯರಿಗೆ ಕಹಿ ಸುದ್ದಿ