Publish Date: Mon, 07 Mar 2022 (10:19 IST)
Updated Date: Mon, 07 Mar 2022 (10:26 IST)
ಲಕ್ನೋ: ಆಸ್ತಿ ವಿಚಾರವಾಗಿ ಜಗಳವಾಡಿಕೊಂಡು ತಂದೆಯನ್ನೇ ಕತ್ತು ಹಿಸುಕಿ ಕೊಂದ ಮಗ ಬಳಿಕ ಕಂಬಳಿಯಲ್ಲಿ ಮೃತದೇಹ ಸುತ್ತಿ ಸುಟ್ಟು ಹಾಕಿದ ಘಟನೆ ನಡೆದಿದೆ.
55 ವರ್ಷದ ತಂದೆ ಜೊತೆಗೆ ಜಗಳವಾಡಿಕೊಂಡಿದ್ದ. ಮನೆಯಲ್ಲಿ ತಾಯಿಯಿಲ್ಲದ ವೇಳೆ ತಂದೆ ಜೊತೆಗೆ ಆಸ್ತಿ ಮಾರಾಟ ಮಾಡುವಂತೆ ಒತ್ತಾಯಿಸಿದ್ದ. ಆದರೆ ತಂದೆ ಒಪ್ಪಿರಲಿಲ್ಲ.
ಈ ಕಾರಣಕ್ಕೆ ಕೋಪಗೊಂಡ ಮಗ ತಂದೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಸುಟ್ಟು ಹಾಕಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.