Select Your Language

Notifications

webdunia
webdunia
webdunia
webdunia

ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಟ್ಯಾಟೂ ಕಲಾವಿದ! ಮುಂದೇನಾಯ್ತು?

ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಟ್ಯಾಟೂ ಕಲಾವಿದ! ಮುಂದೇನಾಯ್ತು?
ಕೊಚ್ಚಿ , ಸೋಮವಾರ, 7 ಮಾರ್ಚ್ 2022 (10:12 IST)
ಕೊಚ್ಚಿ : ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದ ಆರೋಪದ ಮೇಲೆ ಟ್ಯಾಟೂ ಕಲಾವಿದನೊಬ್ಬನನ್ನು ಕೇರಳ ಪೊಲೀಸರು ಶನಿವಾರ ಕೊಚ್ಚಿಯಲ್ಲಿ ಬಂಧಿಸಿದ್ದಾರೆ.

ನಗರದ ಎಡಪಲ್ಲಿಯಲ್ಲಿ ಟ್ಯಾಟೂ ಸ್ಟುಡಿಯೋ ನಡೆಸುತ್ತಿರುವ ಆರೋಪಿ ಸುಜೀಶ್ ಬಂಧಿತ ಆರೋಪಿ. ಸುಜೀಶ್ ವಿರುದ್ಧ 6 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ಯಾಟೂ ಸ್ಟುಡಿಯೋದಲ್ಲಿ ಟ್ಯಾಟೂ ಹಾಕುವಾಗ ಸುಜೀಶ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 18 ವರ್ಷದ ಯುವತಿಯೊಬ್ಬರು ಆರೋಪಿಸಿದ್ದರು. 

ಈಗಾಗಲೇ ಸುಜೀಶ್ನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದ್ದು, ಭಾನುವಾರ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ತಿಳಿಸಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಯುದ್ಧ ಬೇಡ ಎಂಬುದನ್ನು ಪುಟಿನ್ಗೆ ಅರ್ಥ ಮಾಡಿಸಿ: ಕುಲೆಬಾ