Select Your Language

Notifications

webdunia
webdunia
webdunia
webdunia

ಬೆಕ್ಕು ಕಚ್ಚಿ ಮಹಿಳೆಯರು ಸಾವು

ಬೆಕ್ಕು ಕಚ್ಚಿ ಮಹಿಳೆಯರು ಸಾವು
ವಿಜಯವಾಡ , ಮಂಗಳವಾರ, 8 ಮಾರ್ಚ್ 2022 (10:10 IST)
ವಿಜಯವಾಡ: ಬೆಕ್ಕು ಕಚ್ಚಿದ ಪರಿಣಾಮ ಇಬ್ಬರು ಮಹಿಳೆಯರು ರೇಬಿಸ್ ನಿಂದಾಗಿ ಸಾವನ್ನಪ್ಪಿದ್ದಾರೆ. ಇಂತಹದ್ದೊಂದು ಧಾರುಣ ಘಟನೆ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ಎರಡು ತಿಂಗಳ ಹಿಂದೆ 64 ಮತ್ತು 43 ವರ್ಷದ ಮಹಿಳೆಯರಿಬ್ಬರಿಗೆ ಬೆಕ್ಕು ಕಚ್ಚಿತ್ತು. ಇದಕ್ಕಾಗಿ ಟಿಟಿ ಇಂಜಕ್ಷನ್ ನ್ನೂ ಪಡೆದಿದ್ದರು. ಆ ಸಂದರ್ಭದಲ್ಲಿ ಅವರ ಆರೋಗ್ಯ ಸುಧಾರಿಸಿತ್ತು.

ಆದರೆ ನಾಲ್ಕು ದಿನಗಳ ಹಿಂದೆ ಇಬ್ಬರೂ ಮಹಿಳೆಯರು ಅಸ್ವಸ್ಥರಾಗಿದ್ದರು. ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಸೌಕರ್ಯವಿರದ ಕಾರಣ ವೈದ್ಯರ ಸಲಹೆಯಂತೆ ಇನ್ನೊಂದು ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವರದಕ್ಷಿಣೆ ಕೊಡದೇ ಮದುವೆಯಾಗಲ್ಲ ಎಂದ ವರ