ನರಭಕ್ಷಕ ಹುಲಿ ಪಡೆದ ಬಲಿ ಎಷ್ಟು ಗೊತ್ತಾ?

ಬುಧವಾರ, 9 ಅಕ್ಟೋಬರ್ 2019 (17:06 IST)
ಹುಲಿ ದಾಳಿಗೆ ಆ ಪ್ರದೇಶದಲ್ಲಿ ಎರಡನೇ ಬಲಿಯಾಗಿದೆ.

ಜಮೀನಿಗೆ ತೆರಳುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಶಿವಲಿಂಗಪ್ಪ(55)ಎಂಬುವರೇ ಮೃತ ವ್ಯಕ್ತಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಚೌಡಹಳ್ಳಿ ಗ್ರಾಮದ ನಿವಾಸಿ ಶಿವಲಿಂಗಪ್ಪ ಜಮೀನಿಗೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ.

ಒಂದು ತಿಂಗಳ ಅವಧಿಯಲ್ಲಿ ನರಭಕ್ಷಕ ಹುಲಿ ಎರಡನೇ ಬಲಿ ಪಡೆದಿದೆ. ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದ ಮೂರುಕಲ್ಲು ಸಮೀಪ ಘಟನೆ ನಡೆದಿದೆ.

ಅರಣ್ಯಾಧಿಕಾರಿಗಳ ಬೇಜವಾಬ್ದಾರಿಗೆ ಮತ್ತೊಂದು ಬಲಿಯಾಗಿದೆ. ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿಲ್ಲ. ಹೀಗಾಗಿ ಚೌಡಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸಾವಿನ ಭಯದಲ್ಲಿ ಓಡಾಡುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕ್ವಿಂಟಲ್ ಕ್ವಿಂಟಲ್ ಟೊಮೆಟೊ ರಸ್ತೆಗೆ ಸುರಿದ ಬೆಳೆಗಾರ