Select Your Language

Notifications

webdunia
webdunia
webdunia
webdunia

ಕಪಟನಾಟಕ ಪಾತ್ರಧಾರಿಯ ಮಜವಾದ ಟ್ರೇಲರ್!

ಕಪಟನಾಟಕ ಪಾತ್ರಧಾರಿಯ ಮಜವಾದ ಟ್ರೇಲರ್!
ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2019 (13:44 IST)
ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಕಪಟನಾಟಕ ಪಾತ್ರಧಾರಿ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಹಾಡುಗಳ ಮೂಲಕ ಭರಪೂರ ಸದಾಭಿಪ್ರಾಯಗಳನ್ನು ತನ್ನದಾಗಿಸಿಕೊಂಡು ಬಹು ನಿರೀಕ್ಷಿತ ಚಿತ್ರವಾಗಿಯೂ ದಾಖಲಾಗಿದೆ.
ಶೀರ್ಷಿಕೆಯಲ್ಲಿಯೇ ವೈಶಿಷ್ಟ್ಯವನ್ನು ಬಚ್ಚಿಟ್ಟುಕೊಂಡಿರೋ ಕಪಟನಾಟಕ ಪಾತ್ರಧಾರಿಯ ಬಗ್ಗೆಪ್ರಾರಂಭದಿಂದಲೇ ಪ್ರೇಕ್ಷಕರ ಚಿತ್ರ ಹೊರಳಿಕೊಂಡಿತ್ತು. ಈಚೆಗೆ ಹೊರಬಂದಿದ್ದಹಾಡುಗಳೊಂದಿಗೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದ್ದ ಈ ಸಿನಿಮಾ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.
 
ಬಾಲು ನಾಗೇಂದ್ರ ನಾಯಕನಾಗಿ ನಟಿಸಿರೋ ಚಿತ್ರಕಪಟನಾಟಕ ಪಾತ್ರಧಾರಿ. ಇಲ್ಲಿ ಹಲವಾರು ಕೆಲಸಗಳನ್ನು ಅರ್ಧದಲ್ಲಿಯೇ ಬಿಡುತ್ತಾ ಕಡೆಗೂಆಟೋ ಡ್ರೈವರ್ ಆಗಿ ಅವತರಿಸೋ ನಾಯಕ ಮತ್ತು ನಾಯಕಿಯ ಪ್ರೇಮಸಲ್ಲಾಪದೊಂದಿಗೇ ಮತ್ತೊಂದು ಆಯಾಮದ ಕಥೆಯೂ ಇದೆ ಅನ್ನೋದನ್ನು ಈ ಟ್ರೇಲರ್ಅನಾವರಣಗೊಳಿಸಿದೆ. 
 
ಭಯಾನಕ ಕ್ರೈಂ ಒಂದರಲ್ಲಿ ಆಟೋ ಡ್ರೈವರ್ ತಗುಲಿಕೊಂಡುಅದು ಹಾರರ್ ರೂಪವನ್ನೂ ತಾಳೋ ರೋಚಕ ಕಥೆಯ ಸುಳಿವೂ ಕೂಡಾ ಇದರೊಂದಿಗೆಸಿಕ್ಕಿದೆ.ಈವರೆಗೆ ಕಪಟನಾಟಕ ಪಾತ್ರಧಾರಿಯ ಬಗ್ಗೆಅದೆಂಥಾ ಕ್ರೇಜ್ ಹುಟ್ಟಿಕೊಂಡಿತ್ತೋ... ಅದು ಈ ಟ್ರೇಲರ್ ಮೂಲಕ ಮತ್ತಷ್ಟು ತೀವ್ರವಾಗಿದೆ.ವರ್ಷಗಳ ಹಿಂದೆ ತೆರೆ ಕಂಡಿದ್ದ ಹುಲಿರಾಯ ಚಿತ್ರದಲ್ಲಿ ನಾಯಕನಾಗಿ ವಿಜೃಂಭಿಸಿದ್ದವರು ಬಾಲು ನಾಗೇಂದ್ರ. 
 
ಅವರಿಲ್ಲಿ ಮತ್ತೊಂದು ಹೊಸತನದ ಪಾತ್ರದಲ್ಲಿ ನಟಿಸಿದ್ದಾರೆಂಬುದು ಈ ಟ್ರೇಲರ್ನೊಂದಿಗೆಯಾವ ಸಂಶಯಗಳಿಗೂ ಆಸ್ಪದವಿಲ್ಲದಂತೆ ಜಾಹೀರಾಗಿದೆ. ಕಪಟ ನಾಟಕ ಪಾತ್ರಧಾರಿಯೀಗ ಬಿಡುಗಡೆಗೆ ಮುಹೂರ್ತ ಹುಡುಕುತ್ತಿದ್ದಾನೆ. ಹಾಡುಗಳು ಮತ್ತು ಟ್ರೇಲರ್ ಬಿಸಿಯೊಂದಿಗೇ ಇಷ್ಟರಲ್ಲಿಯೇ ಈ ಸಿನಿಮಾದ ಬಿಡುಗಡೆ ದಿನಾಂಕ ಹೊರ ಬೀಳಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪೈರಸಿ ಮಾಡಲು ವಿದೇಶದಿಂದಲೇ ನಡೆಯುತ್ತದೆ ಡೀಲ್! ಜಗ್ಗೇಶ್ ಹೇಳಿದ ಪೈರಸಿ ಕರಾಳ ಸತ್ಯ!