ಕಪಟನಾಟಕ ಪಾತ್ರಧಾರಿಯ ಹಸಿದ ಶಿಕನ ಬೇಟೆ ಹಾಡು!

ಮಂಗಳವಾರ, 10 ಸೆಪ್ಟಂಬರ್ 2019 (13:23 IST)
ಈ ಹಿಂದೆ ಹುಲಿರಾಯ ಎಂಬ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು, ಗೆದ್ದು ಬೀಗಿದ್ದವರು ಬಾಲು ನಾಗೇಂದ್ರ. ಅವರು ಮುಂದ್ಯಾವ ಚಿತ್ರದಲ್ಲಿ ನಟಿಸಲಿದ್ದಾರೆಂಬ ಬಗ್ಗೆ ಪ್ರೇಕ್ಷಕರು ಆಲೋಚಿಸುತ್ತಿರುವಾಗಲೇ ಬಾಲು ಕಪಟನಾಟಕ ಪಾತ್ರಧಾರಿಯ ಅವತಾರವೆತ್ತಿದ್ದಾರೆ. ಕ್ರಿಶ್ ನಿರ್ದೇಶನದ ಈ ಸಿನಿಮಾವೀಗ ಹಾಡುಗಳೊಂದಿಗೆ ಹಂತ ಹಂತವಾಗಿ ಪ್ರೇಕ್ಷಕರನ್ನು ಕಾಡಲಾರಂಭಿಸಿದೆ. ಇತ್ತೀಚೆಗಷ್ಟೇ ಮೊದಲ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಹಿಟ್ ಆಗಿತ್ತು. ಅದೇ ಬಿಸಿಯಲ್ಲೀಗ ಮತ್ತೊಂದು ರಿಲಿಕಲ್ ವೀಡಿಯೋ ಸಾಂಗ್ ಹೊರ ಬಂದಿದೆ.
ಹಸಿದಾ ಶಿಕನು ಬೇಟೆಯಾಡಿದೆ ಒದಲಾ ಕಸಿದು ಸೂರೆ ಮಾಡಿದೆ ಎಂಬಂಥಾ ಹೊಸತನದ, ಒಂದಷ್ಟು ನಿಗೂಢಾರ್ಥಗಳನ್ನು ಬಚ್ಚಿಟ್ಟುಕೊಂಡಂತಿರೋ ಸಾಲುಗಳ ಈ ಹಾಡು ಮೊದಲ ಹಾಡನ್ನೇ ಮೀರಿಸುವಂತೆ ಜನಪ್ರಿಯತೆ ಗಳಿಸಿಕೊಂಡಿದೆ. ಆದಿಲ್ ನದಾಫ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಈ ಹಾಡನ್ನು ಚಾಣಕ್ಯ ಹಾಡಿದ್ದಾರೆ. ಇಶಾ ಸುಚಿ ಧ್ವನಿ ನೀಡಿರೋ ಈ ಲಿರಿಕಲ್ ವೀಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿಯೂ, ಅದರಾಚೆಯೂ ಈಗ ವ್ಯಾಪಕ ಮೆಚ್ಚುಗೆ ಮತ್ತು ಜನಪ್ರಿಯತೆ ಗಳಿಸಿಕೊಂಡಿದೆ.
 
ಹಾಡುಗಳು ಯಾವುದೇ ಚಿತ್ರದ ಪಾಲಿಗಾದರೂ ಶಶಕ್ತವಾದ ಆಮಂತ್ರಣವಿದ್ದಂತೆ ಅನ್ನೋ ಮಾತಿದೆ. ಈ ಫಾರ್ಮುಲಾ ಪ್ರಕಾರವಾಗಿ ನೋಡ ಹೋದರೆ ಕಪಟ ನಾಟಕ ಪಾತ್ರಧಾರಿ ಪ್ರೇಕ್ಷಕರಿಗೆ ಕೊಟ್ಟಿರೋ ಎರಡು ಆಮಂತ್ರಣಗಳೂ ಬೆರಗಾಗುವಂತಿವೆ. ಈ ಹಿಂದೆ ಬಂದಿದ್ದ ಲಿರಿಕಲ್ ವೀಡಿಯೋ ಕೂಡಾ ಪ್ರೇಕ್ಷಕರನ್ನು ರೊಮ್ಯಾಂಟಿಕ್ ಮೂಡಿಗೆ ಜಾರಿಸಿದೆ. ಇದೀಗ ಬಂದಿರೋ ಹಾಡು ಬೇರೆಯದ್ದೇ ಸೌಂಡಿಂಗ್ ಮತ್ತು ಹೊಸತನದಿಂದ ಕೂಡಿದ ಸಾಹಿತ್ಯದೊಂದಿಗೆ ಆಕರ್ಷಿಸಿದೆ. ಒಟ್ಟಾರೆಯಾಗಿ ಬಾಲಿ ನಾಗೇಂದ್ರ ಈ ಬಾರಿ ಆಟೋ ಡ್ರೈವರ್ ಅವತಾರದಲ್ಲಿ ಕಾಣಿಸಿಕೊಳ್ಳುವ ಸನ್ನಾಹದಲ್ಲಿದ್ದಾರೆ. ಈ ಮೂಲಕ ಹೊಸಾ ತಂಡವೊಂದು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವತ್ತ ನಿರ್ಣಾಯಕ ಹೆಜ್ಜೆಯಿಟ್ಟಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿನಿಮಾ ಕನಸಿಗೆ ರೆಕ್ಕೆ ಮೂಡಿಸಲು ಸಜ್ಜಾದ ಜಿ ಅಕಾಡೆಮಿ!