ಕಪಟನಾಟಕ ಪಾತ್ರಧಾರಿಯ ಲಿರಿಕಲ್ ವೀಡಿಯೋ ಹಂಗಾಮ!

ಗುರುವಾರ, 22 ಆಗಸ್ಟ್ 2019 (14:06 IST)
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಭಿನ್ನವಾದ ಟೈಟಲ್‌ಗಳ ಮೂಲಕವೇ ಸದ್ದು ಮಾಡೋ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ಟೈಟಲ್ಲಿನಂಥಾದ್ದೇ ವಿಶಿಷ್ಟವಾದ ಕಥಾ ಹಂದರವನ್ನು ಹೊಂದಿರೋ ಈ ಬಗೆಯ ಅದೆಷ್ಟೋ ಚಿತ್ರಗಳು ಗೆದ್ದು ಬೀಗಿವೆ.

ಸದ್ಯ ಹೊಸತನದಿಂದ ಕೂಡಿದ ಲಿರಿಕಲ್ ವೀಡಿಯೋ ಮೂಲಕ ಸದ್ದು ಮಾಡುತ್ತಿರುವ ಕಪಟನಾಟಕ ಪಾತ್ರಧಾರಿ ಚಿತ್ರವೂ ಅಂಥಾದ್ದೇ ಭರಪೂರ ಗೆಲುವನ್ನು ತನ್ನದಾಗಿಸಿಕೊಳ್ಳುವ ಭರವಸೆ ಮೂಡಿಸಿದೆ. ಇದೀಗ ಫೇಸ್ಬುಕ್ ಥೀಮಿನೊಂದಿಗೆ ಮೂಡಿ ಬಂದಿರೋ ಈ ಲಿರಿಕಲ್ ವೀಡಿಯೋ ಸಾಂಗ್ ಅಂತೂ ವೈರಲ್ ಆಗಿ ಹರಿದಾಡುತ್ತಿದೆ.
ಕ್ರಿಶ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿದ್ದಾರೆ. ಸಂಗೀತಾ ಭಟ್ ನಾಯಕಿಯಾಗಿ ಇದುವರೆಗೂ ಮಾಡಿರದಂಥಾ ಪಾತ್ರವೊಂದಕ್ಕೆ ಜೀವ ತುಂಬಿದ ಖುಷಿಯಲ್ಲಿದ್ದಾರೆ. ಈ ಚಿತ್ರದ ಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನನ್ನು ನೋಡಿ ನಕ್ಬಿಟ್ಳು ಸುಂದ್ರಿ ಎಂಬ ಲಿರಿಕಲ್ ವೀಡಿಯೋ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅದನ್ನು ಪಕ್ಕಾ ಫೇಸ್ಬುಕ್ ಥೀಮ್ನೊಂದಿಗೆ ರೂಪಿಸೋ ಮೂಲಕ ಚಿತ್ರತಂಡ ಶಹಬ್ಬಾಸ್ಗಿರಿ ಪಡೆದುಕೊಳ್ಳುತ್ತಿದೆ.
ಈ ಲಿರಿಕಲ್ ವೀಡಿಯೋವನ್ನು ಫೇಸ್ಬುಕ್ ಮಾದರಿಯಲ್ಲಿಯೇ ರೂಪಿಸಲಾಗಿದೆ. ಫೇಸ್ಬುಕ್ ಪೋಸ್ಟ್ ಮಾಡೋವಾಗ ಟೈಪ್ ಮಾಡುವ ಜಾಗದಲ್ಲಿ ಈ ಹಾಡಿನ ಸಾಹಿತ್ಯ ಮಿನುಗುತ್ತದೆ. ಪೋಸ್ಟ್ ಆದ ರೀತಿಯಲ್ಲಿಯೇ ಫೋಟೋಗಳು ಕದಲುತ್ತವೆ.

ಇನ್ನುಳಿದಂತೆ ತಾಂತ್ರಿಕ ವರ್ಗದ ಪರಿಚಯವನ್ನೂ ಕೂಡಾ ಅವರವರ ಫೇಸ್ಬುಕ್ ಪೇಜಿನ ಮೂಲಕವೇ ಮಾಡುವಂಥಾ ನವೀನ ಪ್ರಯೋಗವನ್ನೂ ಕೂಡಾ ಇಲ್ಲಿ ಮಾಡಲಾಗಿದೆ. ಇದೆಲ್ಲವನ್ನೂ ಕೂಡಾ ಜನ ಎಂಜಾಯ್ ಮಾಡುತ್ತಿದ್ದಾರೆ. ತಾವು ಮೆಚ್ಚಿಕೊಳ್ಳೋದಲ್ಲದೇ ಹಂಚಿಕೊಳ್ಳುವ ಮೂಲಕ ವೈರಲ್ ಆಗುವಂತೆಯೂ ಮಾಡಿದ್ದಾರೆ. ಇನ್ನೇನು ಈ ಚಿತ್ರದ ಬಿಡುಗಡೆ ದಿನಾಂಕವೂ ಅನೌನ್ಸ್ ಆಗಲಿದೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಗಳ ಪುಟಾಣಿ ಕೈ-ಕಾಲುಗಳನ್ನು ಫ್ರೇಮ್ ನೊಳಗೆ ನೋಡಿ ಖುಷಿಯಾದ ಯಶ್-ರಾಧಿಕಾ ದಂಪತಿ