Select Your Language

Notifications

webdunia
webdunia
webdunia
webdunia

ಎಲ್ಲಾ ಬ್ಯಾಂಕ್ ಗಳ ಸಾಲ ತೀರಿಸ್ತೀನಿ ಎಂದ ವಿಜಯ್ ಮಲ್ಯ! ಅಷ್ಟಕ್ಕೂ ಮಲ್ಯ ಭಯಕ್ಕೆ ಕಾರಣವಾಗಿದ್ದು ಏನು ಗೊತ್ತಾ?!

ಎಲ್ಲಾ ಬ್ಯಾಂಕ್ ಗಳ ಸಾಲ ತೀರಿಸ್ತೀನಿ ಎಂದ ವಿಜಯ್ ಮಲ್ಯ! ಅಷ್ಟಕ್ಕೂ ಮಲ್ಯ ಭಯಕ್ಕೆ ಕಾರಣವಾಗಿದ್ದು ಏನು ಗೊತ್ತಾ?!
ನವದೆಹಲಿ , ಬುಧವಾರ, 5 ಡಿಸೆಂಬರ್ 2018 (10:13 IST)
ನವದೆಹಲಿ: ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ತೀರಿಸದೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯ ತನ್ನೆಲ್ಲಾ ಸಾಲ ತೀರಿಸುವುದಾಗಿ ಟ್ವಿಟರ್ ಮೂಲಕ ಬ್ಯಾಂಕ್ ಗಳಿಗೆ ಮನವಿ ಮಾಡಿದ್ದಾರೆ.


ಯುಪಿಎ ಅವಧಿಯಲ್ಲಿ ಕೋಲಾಹಲ ಸೃಷ್ಟಿಸಿದ್ದ ಅಗಸ್ಟಾ ವೆಸ್ಟ್ ಲ್ಯಾಂಡ್ ಕ್ಯಾಪ್ಟರ್ ಡೀಲ್ ನ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ನನ್ನು ದುಬೈ ಕೋರ್ಟ್ ಭಾರತಕ್ಕೆ ಗಡೀಪಾರು ಮಾಡಿ ಆದೇಶ ನೀಡಿದ ಬೆನ್ನಲ್ಲೇ ವಿಜಯ್ ಮಲ್ಯ ಈ ಟ್ವೀಟ್ ಮಾಡಿದ್ದಾರೆ.

ಅಗಸ್ಟಾ ಡೀಲ್ ಮಧ್ಯವರ್ತಿ ಮೈಕಲ್ ನನ್ನು ಇದೀಗ ಭಾರತಕ್ಕೆ ಕಳುಹಿಸಲಾಗುತ್ತಿದ್ದು, ಈತ ಈಗ ಇಲ್ಲಿ ವಿಚಾರಣೆ ಎದುರಿಸಬೇಕಾಗಿದೆ. ಇದೇ ತಂತ್ರಗಾರಿಕೆ ಮೂಲಕ ಸಾಲ ಮಾಡಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ, ವಿಜಯ್ ಮಲ್ಯ ಮೇಲೂ ಪ್ರಯೋಗಿಸಲು ಭಾರತ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಮಲ್ಯ ಇಂತಹದ್ದೊಂದು ಆಫರ್ ನೀಡಿದ್ದಾರೆ!  ಅಷ್ಟೇ ಅಲ್ಲ ತಮ್ಮನ್ನು ಓಡಿಹೋಗಿದ್ದಾಗಿ ಬಿಂಬಿಸುತ್ತಿರುವ ಭಾರತದ ಮಾಧ್ಯಮಗಳ ಮೇಲೂ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಬ್ಯಾಂಕ್ ಗಳ ಸಾಲ ತೀರಿಸ್ತೀನಿ ಎಂದ ವಿಜಯ್ ಮಲ್ಯ! ಅಷ್ಟಕ್ಕೂ ಮಲ್ಯ ಭಯಕ್ಕೆ ಕಾರಣವಾಗಿದ್ದು ಏನು ಗೊತ್ತಾ?!