Publish Date: Fri, 14 Sep 2018 (08:59 IST)
Updated Date: Fri, 14 Sep 2018 (09:01 IST)
ನವದೆಹಲಿ: ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗುವ ಮೊದಲು ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾಗಿದ್ದೆ ಎಂಬ ವಿಜಯ್ ಮಲ್ಯ ಹೇಳಿಕೆ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಮಲ್ಯ ಹೇಳಿಕೆ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮದ್ಯ ದೊರೆ ಸಾಲ ಮಾಡಿ ಪರಾರಿಯಾಗಲು ಬಿಜೆಪಿ ಸಹಾಯ ಮಾಡಿದೆ ಎಂದು ಆರೋಪಿಸಿದ್ದರು. ಇದಕ್ಕೆ ಇದೀಗ ಬಿಜೆಪಿ ತಿರುಗೇಟು ನೀಡಿದೆ.
ಯುಪಿಎ ಕಾಲಾವಧಿಯಲ್ಲಿ ರಾಹುಲ್ ಗಾಂಧಿ ಜತೆಗಿನ ಮಿತ್ರತ್ವದಿಂದಾಗಿಯೇ ಬ್ಯಾಂಕ್ ಗಳು ವಿಜಯ್ ಮಲ್ಯಗೆ ಸೂಕ್ತ ಪುರಾವೆಯಿಲ್ಲದೇ ಯರ್ರಾ ಬಿರ್ರಿ ಸಾಲ ಒದಗಿಸಿದ್ದವು. ಈಗ ಕಾಂಗ್ರೆಸ್ ಮಲ್ಯ ವಿಚಾರದಲ್ಲಿ ಬಿಜೆಪಿಯನ್ನೇ ತಪ್ಪು ಮಾಡಿದ್ದು ಎನ್ನುತ್ತಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.