Publish Date: Thu, 13 Sep 2018 (19:25 IST)
Updated Date: Thu, 13 Sep 2018 (19:27 IST)
ಕೋಟೆ ನಾಡಿನಲ್ಲಿ ಅತ್ಯಂತ ಖ್ಯಾತಿಯನ್ನು ಗಳಿಸಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿಯ ಪ್ರತಿಷ್ಟಾಪನೆ ಕಾರ್ಯ ನಡೆಯಿತು. ಪ್ರತಿಷ್ಠಾಪನೆಯ ಸಮಯದಲ್ಲಿ ಮಾದಾರ ಗುರುಪೀಠದ ಪೀಠಾಧ್ಯಕ್ಷ ಮಾದಾರ ಚನ್ನಯ್ಯ ಸ್ವಾಮೀಜಿ ಭಾಗವಹಿಸಿದ್ದರು.
ಹಿಂದೂ ಮಹಾ ಗಣಪತಿಯ ದರ್ಶನವನ್ನು ಪಡೆಯಲು ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ಸಾಲು ಸರತಿಯಲ್ಲಿ ಭಕ್ತರು ನಿಂತಿದ್ದರು. ಸ್ಟೇಡಿಯಂ ರಸ್ತೆಯಲ್ಲಿರು ದೇವರಾಜ್ ಅರಸ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರತಿಷ್ಠಾಪನೆಗೊಂಡಿರುವ ಹಿಂದೂ ಮಹಾಗಣಪನಿಗೆ 15 ದಿನಗಳ ಕಾಲ ಭಕ್ತರು ಪೂಜೆಯನ್ನು ಸಲ್ಲಿಸಲಿದ್ದಾರೆ. ಆ ನಂತರ ಗಣಪನನ್ನು ಬೃಹತ್ ಶೋಭಾ ಯಾತ್ರೆಯ ಮೂಲಕ ಚಂದ್ರವಳ್ಳಿ ಕೆರೆಯಲ್ಲಿ ವಿಸರ್ಜನೆಯನ್ನು ಮಾಡಲಾಗುತ್ತದೆ.