ಬೆಂಗಳೂರು : ಶುಕ್ಲ ಪಕ್ಷದ ಭಾದ್ರಪದ ಮಾಸ ಚತುರ್ಥಿಯೆಂದು ಬರುವ ಹಬ್ಬವೇ ಗಣೇಶ ಚತುರ್ಥಿ. ಗಣೇಶ, ಕೈಲಾಸದಿಂದ ತನ್ನ ತವರು ಮನೆಗೆ ಬಂದ ತನ್ನ ತಾಯಿ ಗೌರಿಯನ್ನು ಮರಳಿ ಕರೆದುಕೊಂಡು ಹೋಗಲು ಭೂಲೋಕಕ್ಕೆ ಈ ದಿನ ಬರುತ್ತಾನೆ. ಆದ್ದರಿಂದ ಈ ಹಬ್ಬದಂದು ಮನೆಯಲ್ಲಿ ಗಣೇಶ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಾರೆ. ಆದರೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಕೆಲವು ನಿಯಮಗಳಿವೆ.
ಗಣೇಶ ಚತುರ್ಥಿಯಂದು ಸೂರ್ಯೋದಯಕ್ಕೂ ಮುನ್ನ ಎದ್ದು, ಮನೆ ಸ್ವಚ್ಚ ಮಾಡಿ ಎಳ್ಳನ್ನು ಅರೆದು ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿ ಮಡಿವಸ್ತ್ರ ಧರಿಸಬೇಕು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಸ್ವಸ್ತಿಕ್ ರಂಗೋಲಿ ಹಾಕಿ ಅದರ ಮಧ್ಯಭಾಗದಲ್ಲಿ ಒಂದು ಹಿಡಿ ಅಕ್ಷತೆ ಹಾಕಿ ಗಣೇಶ ಮೂರ್ತಿಯನ್ನು ತಂದು ಪೂರ್ವ ದಿಕ್ಕಿನ ಕಡೆ ಮುಖ ಬರುವಂತೆ ಇಟ್ಟು ಪ್ರತಿಷ್ಠಾಪನೆ ಮಾಡಬೇಕು.
ಹಬ್ಬದ ದಿನ ಮಧ್ಯಾಹ್ನ 12 ರಿಂದ 1 ಗಂಟೆಯೊಳಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು. ಏಕೆಂದರೆ ಗಣೇಶ ಹುಟ್ಟಿದ್ದು ಈ ಸಮಯದಲ್ಲಿ ಎಂದು ಪುರಾಣ ಹೇಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.