Select Your Language

Notifications

webdunia
webdunia
webdunia
webdunia

ಗೌರಿ ಹಬ್ಬದಂದು ಮುತ್ತೈದೆಯರಿಗೆ ಕೊಡುವ ಮೊರದ ಬಾಗಿನದಲ್ಲಿ ಈ ವಸ್ತುಗಳು ಇರಲೇಬೇಕು

ಗೌರಿ ಹಬ್ಬದಂದು ಮುತ್ತೈದೆಯರಿಗೆ ಕೊಡುವ ಮೊರದ ಬಾಗಿನದಲ್ಲಿ ಈ ವಸ್ತುಗಳು ಇರಲೇಬೇಕು
ಬೆಂಗಳೂರು , ಬುಧವಾರ, 12 ಸೆಪ್ಟಂಬರ್ 2018 (11:54 IST)
ಬೆಂಗಳೂರು : ಶ್ರಾವಣ ಮಾಸ ಮುಗಿದ ನಂತರ ಬರುವ ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬವೆಂದೇ ಪ್ರತೀಕ. ಈ ಹಬ್ಬದಂದು ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಉಡುಗೊರೆ, ಮೊರದ ಬಾಗಿಲ ಕೊಡುತ್ತಾರೆ. ಗೌರಿ ಹಬ್ಬದಂದು ಮುತ್ತೈದೆಯರಿಗೆ ಕೊಡುವ ಮೊರದ ಬಾಗಿನದಲ್ಲಿ ಈ ವಸ್ತುಗಳು ಇರಲೇಬೇಕು. ಅದು ಯಾವುವು ಎಂದು ನೋಡೋಣ.


ಗೌರಿ ಹಬ್ಬದಂದು ಮುತ್ತೈದೆಯರಿಗೆ ಕೊಡುವ ಮೊರದ ಬಾಗಿನದಲ್ಲಿ ಗೌರಿ ದೇವಿಯ ಸ್ವರೂಪವಾದ ಅರಶಿನ, ಮಹಾಲಕ್ಷ್ಮೀಯ ಸ್ವರೂಪವಾದ ಕುಂಕುಮ, ಸರಸ್ವತಿಯ ಸ್ವರೂಪವಾದ ಸಿಂಧೂರ, ರೂಪ ಲಕ್ಷ್ಮೀಯ ಸ್ವರೂಪವಾದ ಕನ್ನಡಿ, ಶೃಂಗಾರ ಲಕ್ಷ್ಮೀಯ ಸ್ವರೂಪವಾದ ಬಾಚಣಿಗೆ, ಲಜ್ಜಾ ಲಕ್ಷ್ಮೀಯ ಸ್ವರೂಪವಾದ ಕಾಡಿಗೆ, ಶ್ರೀಲಕ್ಷ್ಮೀಯ ಸ್ವರೂಪವಾದ ಅಕ್ಕಿ, ವರ  ಲಕ್ಷ್ಮೀಯ ಸ್ವರೂಪವಾದ ತೊಗರಿಬೇಳೆ, ಸೀತಾ ಲಕ್ಷ್ಮೀಯ ಸ್ವರೂಪವಾದ ಉದ್ದಿನ ಬೇಳೆ, ಸಂತಾನ ಲಕ್ಷ್ಮೀಯ ಸ್ವರೂಪವಾದ ತೆಂಗಿನಕಾಯಿ, ಧನ ಲಕ್ಷ್ಮೀಯ ಸ್ವರೂಪವಾದ ವೀಳ್ಯದೆಲೆ, ಇಷ್ಟ ಲಕ್ಷ್ಮೀಯ ಸ್ವರೂಪವಾದ ಅಡಿಕೆ, ಜ್ಞಾನ ಲಕ್ಷ್ಮೀಯ ಸ್ವರೂಪವಾದ ಹಣ್ಣುಗಳು, ರಸ ಲಕ್ಷ್ಮೀಯ ಸ್ವರೂಪವಾದ ಬೆಲ್ಲ, ವಸ್ತ್ರ ಲಕ್ಷ್ಮೀಯ ಸ್ವರೂಪವಾದ ವಸ್ತ್ರಗಳು, ವಿದ್ಯಾ ಲಕ್ಷ್ಮೀಯ ಸ್ವರೂಪವಾದ ಹೇಸರುಬೇಳೆ ಇರಲೇಬೇಕು.


ಹಾಗೇ ಮುತ್ತೈದೆಯ ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿ ಇರುವುದರಿಂದ ಸೆರಗು ಹಿಡಿದು ಮೊರದ ಬಾಗಿನ ಕೊಡುತ್ತಾರೆ. ಮೊರದ ಬಾಗಿನ ನಾರಾಯಣನ ಅಂಶವಾಗಿದೆ. ಒಳಗಿರುವ ವಸ್ತುಗಳು ಲಕ್ಷ್ಮೀದೇವಿಯ ಸ್ವರೂಪವಾಗಿದ್ದು,  ಈ ಲಕ್ಷ್ಮೀ ನಾರಾಯಣನ ಸ್ವರೂಪವಾದ ಈ ಬಾಗಿನವನ್ನು ತೆಗೆದುಕೊಂಡ ದಂಪತಿಗಳು  ಲಕ್ಷ್ಮೀ ನಾರಾಯಣನ ರೀತಿ ಇರಲಿ ಎಂಬ ಕಾರಣಕ್ಕೆ ಈ ಬಾಗಿನ ಕೊಡುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾನ್ಸರ್‌ ನಂತಹ ಮಾರಕ ರೋಗಗಳನ್ನು ವಾಸಿಮಾಡುವ ಶಕ್ತಿ ಈ ದೇವರಿಗಿದೆಯಂತೆ