Publish Date: Wed, 12 Sep 2018 (14:21 IST)
Updated Date: Wed, 12 Sep 2018 (14:24 IST)
ಗೌರಿ ಗಣೇಶ ಚತುರ್ಥಿ ಹಿನ್ನೆಲೆ-ಗಣೇಶ ಚತುರ್ಥಿ ಆಚರಣೆಗೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಬಳ್ಳಾರಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಮಹಾನಗರ ಪಾಲಿಕೆ, ಜೆಸ್ಕಾಂ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ ಗಣೇಶ ಉತ್ಸವ ಸಂಘಟನೆಗಳು ಆಯಾ ಇಲಾಖೆಗಳ ಮುಂದೆ ಅನುಮತಿ ಪಡೆಯುತ್ತಿದ್ದಾರೆ.
ಗಾಂಧಿನಗರ ಪೊಲೀಸ್ ಠಾಣಾ ಆವರಣದಲ್ಲಿ ಅನುಮತಿ ಕೇಂದ್ರ ಆರಂಭ ಮಾಡಲಾಗಿದೆ. ಇದುವರೆಗೆ 110ಕ್ಕೂ ಹೆಚ್ಚು ಸಂಘಟನೆಗಳಿಂದ ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿವೆ. ವಿದ್ಯುತ್ ಮಿತ ಬಳಕೆ, ಧ್ವನಿವರ್ಧಕ, ತ್ಯಾಜ್ಯ, ಪರಿಸರಕ್ಕೆ ಪೂರಕವಾಗಿ ಗಣೇಶ ಚತುರ್ಥಿ ಆಚರಣೆಗೆ ಸೂಚನೆಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಗಣೇಶ ಉತ್ಸವ ಆಚರಣೆಗಾಗಿ ಅನುಮತಿ ಕೋರಿ ಸಾವಿರಕ್ಕೂ ಅಧಿಕ ಅರ್ಜಿಗಳು ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.