ಇನ್ಮುಂದೆ ಪಾನ್ ಕಾರ್ಡ್ ಗೆ ತಂದೆ ಹೆಸರು ಕಡ್ಡಾಯವಾಗಿ ನಮೂದಿಸಬೇಕಿಲ್ಲ

ಭಾನುವಾರ, 2 ಸೆಪ್ಟಂಬರ್ 2018 (11:09 IST)
ನವದೆಹಲಿ : ಸಿಂಗಲ್ ಪೇರೆಂಟ್ ಬಳಿಯಲ್ಲಿ ಬೆಳೆದವರಿಗೆ ಇನ್ನು ಮುಂದೆ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋಕೆ ಹಿಂಜರಿಯಬೇಕಿಲ್ಲ. ಯಾಕೆಂದರೆ ಸರ್ಕಾರ ಪ್ಯಾನ್ ಕಾರ್ಡ್ ಪಡೆಯುವವರಿಗೆ ಹೊಸ ನಿಯಮವೊಂದನ್ನು  ಜಾರಿಗೆ ತಂದಿದೆ.


ಸದ್ಯ ಜಾರಿಯಲ್ಲಿರುವ ನಿಯಮದ ಪ್ರಕಾರ ಪ್ಯಾನ್ ಕಾರ್ಡ್ ಗೆ ತಂದೆಯ ಹೆಸರನ್ನು ನೀಡುವುದು ಕಡ್ಡಾಯವಾಗಿದೆ. ಹಾಗು ಆದಾಯ ತೆರಿಗೆ ವಿವರಗಳನ್ನು ಘೋಷಿಸುವುದು ಕಡ್ಡಾಯವಾಗಿದೆ. ಇದರಿಂದ ಸಿಂಗಲ್ ಪೇರೆಂಟ್ ಬಳಿಯಲ್ಲಿ ಬೆಳೆದವರಿಗೆ ಈ ನಿಯಮದಿಂದ ಪ್ಯಾನ್ ಕಾರ್ಡ್   ಪಡೆಯೋಕೆ ತುಂಬಾ ಕಷ್ಟವಾಗುತಿತ್ತು. ಈ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಈ ಬಗ್ಗೆ ಹಲವು ಮನವಿಗಳು ಬಂದ ಕಾರಣ ಇದೀಗ ಹೊಸ ಕ್ರಮವನ್ನು ಜಾರಿಗೆ ತರಲು ಮುಂದಾಗಿದೆ.


ಪ್ಯಾನ್ ಕಾರ್ಡ್ ಪಡೆಯೋಕೆ ಇನ್ಮುಂದೆ ತಂದೆಯ ಹೆಸರು ಕಡ್ಡಾಯವಲ್ಲ ಅನ್ನೋ ಶಿಫಾರಸ್ಸನ್ನು ಕಾಲಂ 114ರ ಅಡಿಯಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈಗ ಈ ನಿಯಮದಲ್ಲಿ ವಿನಾಯಿತಿ ನೀಡಲಾಗಿದ್ದು ಸೆಪ್ಟೆಂಬರ್ 17ರ 2018ರಿಂದ ಹೊಸ ನಿಯಮ ಜಾರಿಗೆ ಬರುವ ನಿರೀಕ್ಷೆ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 91 ವರ್ಷದ ತಾತ ತನ್ನ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದ!