Select Your Language

Notifications

webdunia
webdunia
webdunia
webdunia

ಕಣ್ಸನ್ನೆ ಬೆಡಗಿಯ ಮೇಲೆ ದೂರು ದಾಖಲಿಸಿದವರಿಗೆ ಸುಪ್ರೀಂ ಕೋರ್ಟ್ ನಿಂದ ತರಾಟೆ

ಕಣ್ಸನ್ನೆ ಬೆಡಗಿಯ ಮೇಲೆ ದೂರು ದಾಖಲಿಸಿದವರಿಗೆ  ಸುಪ್ರೀಂ ಕೋರ್ಟ್ ನಿಂದ ತರಾಟೆ
ನವದೆಹಲಿ , ಶನಿವಾರ, 1 ಸೆಪ್ಟಂಬರ್ 2018 (07:16 IST)
ನವದೆಹಲಿ : ಕಣ್ಮಿಟುಕಿಸಿದಕ್ಕೆ  ಮಲಯಾಳಂ ನಟಿ ಪ್ರಿಯಾ ವಾರಿಯರ್ ವಿರುದ್ಧ ಕೇಸು ಇದೀಗ  ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.


'ಓರು ಅದರ್ ಲವ್' ಎಂಬ ಮಲಯಾಳಿ ಚಿತ್ರದಲ್ಲಿ ನಟಿಸಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಈ ಚಿತ್ರದ ಹಾಡೋಂದರಲ್ಲಿ ಕಣ್ಣು ಮಿಟುಕಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬಾರೀ ಸುದ್ದಿಯಾಗಿದ್ದರು. ಆದರೆ ಈ ಕಣ್ಸನ್ನೆ ಸಮಾಜದಲ್ಲಿ ಶಾಂತಿ ಕದಡುವಂತಿದೆ ಎಂದು ಆರೋಪಿಸಿ ನಟಿಯ ವಿರುದ್ಧ ದೂರು ದಾಖಲಿಸಿದ್ದರು.


ಇದೀಗ ಈ ಕೇಸ್ ನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, “ಕಣ್ಣು ಹೊಡೆದಿದ್ದನ್ನೇ, ಹಾಡಿನಲ್ಲಿ ಕಾಣಿಸಿಕೊಂಡಿದ್ದನ್ನೋ ಆಧಾರವಾಗಿಟ್ಟುಕೊಂಡು ಎಫ್ ಐ ಆರ್ ದಾಖಲಿಸಲು ಸಾಧ್ಯವಿಲ್ಲ. ಸುಮ್ಮನೆ ಸಮಯ ವ್ಯರ್ಥ ಮಾಡಲು ಇಂಥ ಪ್ರಕರಣ ದಾಖಲು ಮಾಡಬೇಡಿ” ಎಂದು ಕೇಸು ದಾಖಲಿಸಿದವರನ್ನು ತರಾಟೆಗೆ ತೆಗೆದುಕೊಂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿ ಸಾಮೂಹಿಕವಾಗಿ ಅತ್ಯಾಚಾರ!