ಹುಡುಗಿಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಳ್ಳುವುದಕ್ಕೆ ಏನೆಲ್ಲಾ ಮಾಡಿದ ಗೊತ್ತಾ ಈ ಹುಡುಗ

ಶುಕ್ರವಾರ, 31 ಆಗಸ್ಟ್ 2018 (07:02 IST)
ನವದೆಹಲಿ : ಸಬ್ ಇನ್ಸ್ ಪೆಕ್ಟರ್ 16 ವರ್ಷದ ಪುತ್ರಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಪೊಲೀಸ್ ಅಧಿಕಾರಿಯ 17 ವರ್ಷದ ಪುತ್ರ ನನ್ನು ಪೊಲೀಸರು ಬಂಧಿಸಿದ ಘಟನೆ ದ್ವಾರಕಾದಲ್ಲಿ ನಡೆದಿದೆ.


ಬಂಧಿತ ಬಾಲಕನ ತಂದೆ ಹಾಗೂ ಸಂತ್ರಸ್ತ ಬಾಲಕಿಯ ತಂದೆ ದ್ವಾರಕಾ ಜಿಲ್ಲೆಯ ಬೇರೆ ಬೇರೆ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತ ಬಾಲಕಿಯ ಸಹೋದರ ಬಂಧಿತ ಬಾಲಕನ್ನು ಪರಿಚಯ ಮಾಡಿಸಿದ ನಂತರ ಇವರಿಬ್ಬರು ಉತ್ತಮ ಸ್ನೇಹಿತರಂತೆ ಇದ್ದರಂತೆ. ಆದರೆ ಕೆಲವು ದಿನಗಳ ಹಿಂದೆ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ತಂಪು ಪಾನಿಯಲ್ಲಿ ಅಮಲು ಬರುವ ವಸ್ತುವನ್ನು ಹಾಕಿಕೊಟ್ಟು ಆಕೆಯ ಮೇಲೆ ಅತ್ಯಾಚಾರ ಎಸಗಿ, ಅದನ್ನು ವಿಡಿಯೋ ಮಾಡಿಕೊಂಡಿದ್ದಾನಂತೆ.


ನಂತರ ಆ ವಿಡಿಯೋ ತೋರಿಸಿ ಆಕೆಯನ್ನು ಹೆದರಿಸಿ 5 ತಿಂಗಳಿನಿಂದ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದಾನಂತೆ. ಕೆಲವು ದಿನಗಳಿಂದ ಮಾನಸಿಕವಾಗಿ ಕುಗ್ಗಿದ್ದ ಸಂತ್ರಸ್ತ ಬಾಲಕಿ ಮೊಬೈಲ್‍ನಲ್ಲಿ ಬಾಲಕನ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದರಿಂದ ಕೋಪಗೊಂಡ ಬಾಲಕ ಸಂತ್ರಸ್ತೆಯ ಮನೆಗೆ ಹೋಗಿ ಸೆಕ್ಸ್ ನಡೆಸುವಂತೆ ಒತ್ತಡ ಹೇರಿದ್ದಾನೆ.


ಈ ವಿಚಾರ ಬಾಲಕಿ ತಂದೆಯ ಕಿವಿಗೆ ಬಿದ್ದ ತಕ್ಷಣ ಅವರು ಆತನನ್ನು ಹಿಡಿದು ದ್ವಾರಕಾ ಉತ್ತರ ವಲಯದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಾಲಕನನ್ನು ಬಾಲನ್ಯಾಯ ಮಂಡಳಿಗೆ ಹಾಜರು ಪಡಿಸಿ, ಈಗ ರಿಮ್ಯಾಂಡ್ ಹೋಮ್ ನಲ್ಲಿ ಇರಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿದ್ಯೆ ಕಲಿಯಲು ಬಂದ ಹುಡುಗರಿಗೆ ಲೈಂಗಿಕ ಚಟುವಟಿಕೆ ಮಾಡೋಣ ಬಾ ಎನ್ನುತ್ತಿದ್ದ ಈ ಸಂನ್ಯಾಸಿ