Publish Date: Tue, 28 Aug 2018 (10:33 IST)
Updated Date: Tue, 28 Aug 2018 (10:36 IST)
ಬಿಹಾರ : ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಅಮಾನವೀಯ ಘಟನೆ ಬಿಹಾರದ ಸಿವಾನ್ ನಲ್ಲಿ ನಡೆದಿದೆ.
ಜಿಯಾವುದ್ದೀನ್ ಎಂಬಾತ ಇಂತಹ ನೀಚ ಕೃತ್ಯ ಎಸಗಿದ ಪಾಪಿ. ಇತ ಶನಿವಾರ ರಾತ್ರಿ ಮದುವೆ ಮನೆಯಲ್ಲಿದ್ದ ಬಾಲಕಿಯನ್ನು ಪುಸಲಾಯಿಸಿ ತೋಟಕ್ಕೆ ಕರೆದೊಯ್ದು ಅಲ್ಲಿ ಆತ ಬಾಲಕಿ ಕೂಗದಿರಲಿ ಎನ್ನುವ ಕಾರಣಕ್ಕೆ ಆಕೆಯ ಬಾಯಿಗೆ ಬಟ್ಟೆ ತುರುಕಿ ಈ ಕೃತ್ಯವೆಸಗಿದ್ದಾನಂತೆ. ಈ ದುರ್ಘಟನೆಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.
ತಡರಾತ್ರಿಯಾದ್ರೂ ಬಾಲಕಿ ಮನೆಗೆ ಬರದ ಕಾರಣ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳೀಯರನ್ನು ವಿಚಾರಿಸಿದಾಗ ಬಾಲಕಿ ಕೊನೆಯದಾಗಿ ಜಿಯಾವುದ್ದೀನ್ ಜೊತೆಗಿದ್ದಳು ಎಂದು ಅನೇಕರು ಹೇಳಿದ್ದಾರೆ. ಅನುಮಾನ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದಾಗ ಸತ್ಯ ಹೊರಬಿದ್ದಿದೆ. ಆರೋಪಿ ಮಾಹಿತಿ ಮೇರೆಗೆ ತೋಟದಲ್ಲಿದ್ದ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.