Publish Date: Fri, 31 Aug 2018 (06:58 IST)
Updated Date: Fri, 31 Aug 2018 (15:27 IST)
ಪಾಟ್ನಾ : ಇತ್ತೀಚಿಗಿನ ದಿನಗಳಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಆದರೆ ಈಗ ಬಾಲಕರ ಮೇಲೆ ಕೂಡ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಗಳು ಕೇಳಿಬರುತ್ತಿದ್ದು, ಇದೀಗ ಬಿಹಾರದ ಬೋಧ್ ಗಯಾದಲ್ಲಿರುವ ಪ್ರಸನ್ನ ಜ್ಯೋತಿ ಬೌದ್ಧ ಶಾಲೆ ಮತ್ತು ಧ್ಯಾನ ಕೇಂದ್ರ ಎಂಬ ಸಂಸ್ಥೆಯಲ್ಲಿ ಇಂತಹದೊಂದು ಘಟನೆ ನಡೆದಿದೆ.
ಬೋಧ್‍ಗಯಾದಲ್ಲಿನ ಮಾಸ್ತಿಪುರ್ ಗ್ರಾಮದಲ್ಲಿ ಬೌದ್ಧ ಸನ್ಯಾಸಿಯೊಬ್ಬರು, ಪ್ರಸನ್ನ ಜ್ಯೋತಿ ಬೌದ್ಧ ಶಾಲೆ ಮತ್ತು ಧ್ಯಾನ ಕೇಂದ್ರ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದನು. ಆ ಕೇಂದ್ರದಲ್ಲಿ ಅಸ್ಸಾಂನ ಕರ್ಬಿ ಆಂಗ್ಲೋಂಗ್ ಜಿಲ್ಲೆಯ ಮಕ್ಕಳು ಅಧ್ಯಯನ ಮಾಡುತ್ತಿದ್ದರು.
ಆದರೆ ಆ ಸನ್ಯಾಸಿ 6 ರಿಂದ 12 ವರ್ಷದ 15 ಜನ ಬಾಲಕರನ್ನು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಒತ್ತಡ ಹಾಕುತ್ತಿದ್ದು, ಈ ಕುರಿತು ಆ ಬಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಇದೀಗ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ತಕ್ಷಣ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.