Publish Date: Wed, 12 Sep 2018 (14:07 IST)
Updated Date: Wed, 12 Sep 2018 (14:09 IST)
ಮಂಡ್ಯ ಜಿಲ್ಲೆಗೆ ಆಗಮಿಸದ ನಟಿ ಹಾಗೂ ಮಾಜಿ ಸಂಸದೆ ರಮ್ಯಾಗೆ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಟಾಂಗ್ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರಿಂದ ತವರು ಮರೆತ ತಂಗಿಗೆ ಬಾಗಿನ ರವಾನೆ ಮಾಡಲಾಗಿದೆ. ಹೂ, ಬಳೆ ಹಾಗೂ ತೆಂಗಿನ ಕಾಯಿ ಒಳಗೊಂಡ ಬಾಗಿನ ರವಾನೆ ಮಾಡಲಾಗಿದೆ. ಮಾಜಿ ಸಂಸದೆ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ನೆ ಬಾಗಿನವನ್ನು ಪೋಸ್ಟ್ ಆಫೀಸ್ ನಲ್ಲಿ ಪಾರ್ಸಲ್ ಕಳಿಸುವ ಮೂಲಕ ವ್ಯಂಗ್ಯ ಮಾಡಲಾಗಿದೆ.
ಸಹೋದರಿ ರಮ್ಯಾ ತವರು ಮರೆತಿದ್ದು, ಅವರಿಗೆ ತವರು ಮಂಡ್ಯ ನೆನಪಾಗಲಿ ಅಂತಾ ಬಾಗಿನ ರವಾನೆ ಮಾಡಲಾಗಿದೆ.
ಮಂಡ್ಯ ಬಿಜೆಪಿ ಕಾರ್ಯಕರ್ತರಿಂದ ಸಹೋದರಿಗೆ ಪ್ರೀತಿಯ ತವರಿನ ಉಡುಗೊರೆ ಇದು ಎಂದು ಬಿಜೆಪಿ ಕಾರ್ಯಕರ್ತರು ಲೇವಡಿ ಮಾಡಿದ್ದಾರೆ. ಕಳೆದ ವಿಧಾನ ಸಭೆ ಹಾಗೂ ನಗರಸಭೆ ಚುನಾವಣೆಗೂ ಮತ ಚಲಾಯಿಸದ ರಮ್ಯಾ ವಿರುದ್ಧ ಜನರಲ್ಲಿ ಆಕ್ರೋಶ ಹೆಚ್ಚುತ್ತಿದೆ.
ಗೌರಿ ಗಣೇಶನ ಹಬ್ಬಕ್ಕಾದರೂ ಮಂಡ್ಯಕ್ಕೆ ಆಗಮಿಸಿ ಎಂದು ಬಿಜೆಪಿ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ.
ಇನ್ನಾದ್ರೂ ತವರಿಗೆ ಆಗಮಿಸಿ ತವರಿನ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಕಳೆದ ಎರಡು ವರ್ಷದಿಂದ ಮಂಡ್ಯದಿಂದ ಕಣ್ಮರೆಯಾಗಿರೋ ರಮ್ಯಾ ಈಗಲಾದ್ರೂ ಮಂಡ್ಯಕ್ಕೆ ಆಗಮಿಸದಿದ್ರೆ ಮುಂದಿನ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ರೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.