Select Your Language

Notifications

webdunia
webdunia
webdunia
webdunia

ನಿಮ್ಮ ಬಾಸ್ ಯಾರು ಎಂಬ ಅಭಿಮಾನಿ ಪ್ರಶ್ನೆಗೆ ಕಿಚ್ಚ ಸುದೀಪ್ ಕೊಟ್ಟ ಉತ್ತರವೇನು ಗೊತ್ತಾ?

ಕಿಚ್ಚ ಸುದೀಪ್
ಬೆಂಗಳೂರು: ಕಿಚ್ಚ ಸುದೀಪ್ ಸದಾ ಟ್ವಿಟರ್ ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿರುತ್ತಾರೆ. ಸಾಧ್ಯವಾದಷ್ಟು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ಕಿಚ್ಚನಿಗೆ ಅಭಿಮಾನಿಯೊಬ್ಬ ವಿಶೇಷ ಪ್ರಶ್ನೆ ಕೇಳಿದ್ದಾನೆ.


ನಮ್ಮ ಬಾಸ್ ನೀವು, ನಿಮ್ಮ ಬಾಸ್ ಯಾರು ಎಂದು ಸುದೀಪ್ ಗೆ ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಕಿಚ್ಚ ಕೊಟ್ಟ ಉತ್ತರ ಅಷ್ಟೇ ಖಡಕ್ ಆಗಿತ್ತು. ‘ನನಗೆ ಬಾಸ್ ಇಲ್ಲ. ಆ ಸ್ಥಾನದಲ್ಲಿ ತಂದೆ ಇದ್ದಾರೆ’ ಎಂದು ಕಿಚ್ಚ ಉತ್ತರಿಸಿದ್ದಾರೆ.

ಇನ್ನೊಬ್ಬ ಅಭಿಮಾನಿ ನಿಮ್ಮ ನಿಜ ಜೀವನದಲ್ಲಿ ಕುಸ್ತಿ ಆಡಿದ್ದೀರಾ ಎಂದು ಕೇಳಿದ್ದಕ್ಕೆ ರಿಯಲ್ ಲೈಫ್ ನಲ್ಲಿ ಬೇರೆ ಬೇರೆ ರೀತಿಯ ಕುಸ್ತಿ ನಡೆಯುತ್ತಲೇ ಇರುತ್ತದೆ ಎಂದು ನಿಗೂಢವಾಗಿ ಉತ್ತರಿಸಿದ್ದಾರೆ. ಪೈಲ್ವಾನ್ ಬಿಡುಗಡೆಗೆ ಮುನ್ನ ಸುದೀಪ್ ಟ್ವಿಟರ್ ನಲ್ಲಿ ಪ್ರಶ್ನೋತ್ತರ ಸೆಷನ್ ಮಾಡಿದ್ದು, ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ಯತ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಬಾಸ್ ದರ್ಶನ್ ಅಭಿಮಾನಿಯಿಂದ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಪೋಸ್ಟ್