Publish Date: Tue, 24 Sep 2019 (10:05 IST)
Updated Date: Tue, 24 Sep 2019 (10:07 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಯಾರ ಚಿತ್ರ ಗೆಲ್ಲಬೇಕು, ಸೋಲಬೇಕು ಎಂದು ನಿರ್ಧರಿಸುವವರು ಜನರಲ್ಲ! ಪೈರಸಿ ಮಾಡುವವರು! ಹೀಗಂತ ನವರಸನಾಯಕ ಜಗ್ಗೇಶ್ ಪೈರಸಿ ಬಗೆಗಿನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಒಬ್ಬ ನಿರ್ದಿಷ್ಟ ಸ್ಟಾರ್ ನನ್ನು ಗುರಿಯಾಗಿಟ್ಟುಕೊಂಡು ಆತನ ಸಿನಿಮಾ ಹಾಳು ಮಾಡಿ ಸ್ಟಾರ್ ಗಿರಿ ತಪ್ಪಿಸಲು ಬೇಕಾದ ಎಲ್ಲಾ ಪ್ರಯತ್ನವೂ ನಡೆಯುತ್ತದೆ. ಉದ್ದೇಶಪೂರ್ವಕವಾಗಿಯೇ ಒಂದು ಚಿತ್ರ ಹಿಟ್ ಆಗದಂತೆ, ಒಬ್ಬನ ಸ್ಟಾರ್ ಗಿರಿ ಪಟ್ಟ ತಪ್ಪಿಸಲು ಹಫ್ತಾ ಕೊಡಲಾಗುತ್ತದೆ. ಇದೆಲ್ಲವೂ ಬ್ಯುಸಿನೆಸ್ ರೀತಿ ನಡೆಯುತ್ತಿದೆ.
ತಮಿಳುನಾಡಿನ ಯುವಕ ಈ ಕೆಲಸ ಶುರು ಮಾಡಿ ಇಂದು ಅದರಲ್ಲೇ ದುಡ್ಡು ಮಾಡಿ ವಿದೇಶಕ್ಕೆ ಹೋಗಿ ಕುಳಿತು ಈಗ ಅಲ್ಲಿಂದಲೇ ಸುಪಾರಿ ಪಡೆದು ಈ ಕೆಲಸ ಮಾಡುತ್ತಿದ್ದಾನೆ. ಇವನಿಗೆ ಹಫ್ತಾ ನೀಡಿದರೆ ಕೆಲಸ ಮಾಡಿ ಮುಗಿಸುತ್ತಾನೆ. ಬಳಿಕ ಹಫ್ತಾ ನೀಡಿದವರು ಇವನಿಗೆ ಲಂಚ ಕೊಟ್ಟ ಸಾಕಾಗಿ ಕಾಲಿಗೆ ಬೀಳುವಂತೆ ಮಾಡುತ್ತಾನೆ ಎಂದು ಜಗ್ಗೇಶ್ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.