Select Your Language

Notifications

webdunia
webdunia
webdunia
webdunia

ಪೈಲ್ವಾನ್ ಪೈರಸಿ ಬಳಿಕ ಎಚ್ಚೆತ್ತುಕೊಂಡ ಗೀತಾ ಸಿನಿಮಾ ತಂಡ ಮಾಡಿದ್ದೇನು ಗೊತ್ತಾ?

ಪೈಲ್ವಾನ್ ಪೈರಸಿ ಬಳಿಕ ಎಚ್ಚೆತ್ತುಕೊಂಡ ಗೀತಾ ಸಿನಿಮಾ ತಂಡ ಮಾಡಿದ್ದೇನು ಗೊತ್ತಾ?
ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2019 (08:56 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪೈರಸಿ ವಿವಾದ ಸ್ಯಾಂಡಲ್ ವುಡ್ ನಲ್ಲಿ ಸಂಚಲನವುಂಟು ಮಾಡಿತ್ತು. ಈ ವಿವಾದ ಇಬ್ಬರು ಘಟಾನುಘಟಿ ಸ್ಟಾರ್ ಗಳ ಮಧ್ಯೆ ಮನಸ್ತಾಪ ಹೆಚ್ಚು ಮಾಡಿತ್ತು. ಆದರೆ ಈ ವಿವಾದದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ತಂಡ ಪಾಠ ಕಲಿತಿದೆ.


ಗೀತಾ ಸಿನಿಮಾ ಇದೇ ವಾರಂತ್ಯಕ್ಕೆ ಅಂದರೆ ಸೆಪ್ಟೆಂಬರ್ 27 ರಂದು ತೆರೆಗೆ ಬರಲಿದ್ದು, ಅದಕ್ಕೂ ಮೊದಲೇ ಚಿತ್ರತಂಡ ತಮ್ಮ ಚಿತ್ರ ಪೈರಸಿಯಾಗದಂತೆ ಮಾಡಲು ಎಲ್ಲಾ ಕ್ರಮ ಕೈಗೊಂಡಿದೆ.

ಈಗಾಗಲೇ ಪ್ರಮುಖ ಆಂಟಿ ಪೈರಸಿ ಸಂಸ್ಥೆಯೊಂದಿಗೆ ಟೈ ಅಪ್ ಮಾಡಿಕೊಂಡಿರುವ ಗೀತಾ ಸಿನಿಮಾ ತಂಡ ಚಿತ್ರಬಿಡುಗಡೆ ದಿನ ಸಿನಿಮಾ ಸೋರಿಕೆಯಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಮ್ ಡಿಸಿಪಿ ರವಿಕುಮಾರ್ ಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.  ಅಷ್ಟೇ ಅಲ್ಲದೆ, ತಮ್ಮದೇ ಪ್ರತ್ಯೇಕ ತಂಡವನ್ನು ರಚಿಸಿರುವ ಚಿತ್ರತಂಡ, ಸಿನಿಮಾ ಪ್ರದರ್ಶನವಾಗುವ ಥಿಯೇಟರ್ ಗಳಲ್ಲಿ ಚೆಕಿಂಗ್ ಮಾಡಲಿದೆಯಂತೆ. ಈ ಮೂಲಕ ತಮ್ಮ ಸಿನಿಮಾ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ಗೆ ದಾದಾ ಸಾಹೇಬ್ ಪ್ರಶಸ್ತಿ: ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಡಾ. ರಾಜ್ ಅಭಿಮಾನಿ ಬಳಗ