ಡಾ.ರಾಜ್ ಜತೆ ತೆರೆ ಹಂಚಿಕೊಳ್ಳಲಿರುವ ಗೋಲ್ಡನ್ ಸ್ಟಾರ್ ಗಣೇಶ್!

ಶನಿವಾರ, 14 ಸೆಪ್ಟಂಬರ್ 2019 (13:08 IST)
ಬೆಂಗಳೂರು: ಗೀತಾ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ವರನಟ ಡಾ. ರಾಜ್ ಕುಮಾರ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ! ಹೇಗೆ ಅಂತೀರಾ?


ಈಗಾಗಲೇ ಟೀಸರ್, ಟ್ರೈಲರ್ ವೀಕ್ಷಿಸಿದವರಿಗೆ ಈ ಸಿನಿಮಾದಲ್ಲಿ ಗೋಕಾಕ್ ಚಳವಳಿಯ ತುಣುಕುಗಳಿರುವುದು ಗೊತ್ತಿರುತ್ತದೆ. ಕನ್ನಡ ಪರ ಹೋರಾಟದ ಹಿನ್ನಲೆಯ ಕತೆಯಿರುವ ಗೀತಾ ಸಿನಿಮಾದಲ್ಲಿ ಡಾ. ರಾಜ್ ನೇತೃತ್ವ ವಹಿಸಿದ್ದ ಗೋಕಾಕ್ ಕನ್ನಡ ಚಳವಳಿಯ ಕೆಲವು ದೃಶ್ಯಗಳನ್ನು ತೋರಿಸಲಾಗಿದೆ.

ಆ ಮೂಲಕ ಡಾ.ರಾಜ್ ಜತೆ ತೆರೆ ಹಂಚಿಕೊಂಡಷ್ಟೇ ಖುಷಿಯಲ್ಲಿ ಗಣೇಶ್ ಇದ್ದಾರೆ. ಈ ಸಿನಿಮಾದಲ್ಲಿ ಡಾ. ರಾಜ್ ಜತೆಗೆ ಹಳೆಯ ನಟರನ್ನೂ ಕಾಣಬಹುದಾಗಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಲ್ಟಿಪ್ಲೆಕ್ಸ್ ಗಳಲ್ಲಿ ಪೈಲ್ವಾನ್ ಶೋ ಖಾಲಿ ಹೊಡೆಯುತ್ತಿದೆ ಎಂದು ಕಿಚಾಯಿಸಿದವರಿಗೆ ತಕ್ಕ ಎದಿರೇಟು ಕೊಟ್ಟ ಕಿಚ್ಚ ಸುದೀಪ್ ಫ್ಯಾನ್ಸ್