ಮಲ್ಟಿಪ್ಲೆಕ್ಸ್ ಗಳಲ್ಲಿ ಪೈಲ್ವಾನ್ ಶೋ ಖಾಲಿ ಹೊಡೆಯುತ್ತಿದೆ ಎಂದು ಕಿಚಾಯಿಸಿದವರಿಗೆ ತಕ್ಕ ಎದಿರೇಟು ಕೊಟ್ಟ ಕಿಚ್ಚ ಸುದೀಪ್ ಫ್ಯಾನ್ಸ್

ಶನಿವಾರ, 14 ಸೆಪ್ಟಂಬರ್ 2019 (12:26 IST)
ಬೆಂಗಳೂರು: ಮಲ್ಟಿಪ್ಲೆಕ್ಸ್ ಥಿಯೇಟರ್ ಗಳಲ್ಲಿ ಪೈಲ್ವಾನ್ ಶೋ ಹೇಗೆ ಖಾಲಿ ಹೊಡೆಯುತ್ತಿದೆ ನೋಡಿ ಎಂದು ಕಿಚಾಯಿಸಿದ ಕೆಲವು ತೆಲುಗು ಮೂಲದ ಪ್ರೇಕ್ಷಕರಿಗೆ ಕಿಚ್ಚ ಸುದೀಪ್ ಅಭಿಮಾನಿಗಳು ತಕ್ಕ ತಿರುಗೇಟು ಕೊಟ್ಟಿದ್ದಾರೆ.

 
ಮಲ್ಟಿಪ್ಲೆಕ್ಸ್ ಥಿಯೇಟರ್ ಗಳಲ್ಲಿ ಪೈಲ್ವಾನ್ ಶೋ ಆರಂಭವಾಗಲು 20 ನಿಮಿಷ ಬಾಕಿಯಿದ್ದರೂ ಹೇಗೆ ಸೀಟ್ ಖಾಲಿ ಹೊಡೆಯುತ್ತಿದೆ ನೋಡಿ ಎಂದು ಚಿತ್ರ ಸಮೇತ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೆಣಕಿದ್ದರು.

ಇದಕ್ಕೆ ತಕ್ಕ ಎದಿರೇಟು ಕೊಟ್ಟಿರುವ ಕಿಚ್ಚನ  ಅಭಿಮಾನಿಗಳು ಇದು ರಜಾ ದಿನವಲ್ಲ. ಇಲ್ಲಿ ಕಚೇರಿ ಇರುವ ದಿನವೂ ಚಕ್ಕರ್ ಹೊಡೆದು ಸಿನಿಮಾ ನೋಡಲು ನಿಮ್ಮ ಊರಿನವರಲ್ಲ. ವಾರಂತ್ಯದಲ್ಲಿ ನೋಡಿ ಹೇಗೆ ಸೀಟ್ ತುಂಬಿರುತ್ತದೆ ಅಂತ. ಇನ್ನು ಕೆಲವರು ಏನೇ ಆದರೂ ನಮ್ಮ ಬೆಂಬಲ ಕಿಚ್ಚ ಸುದೀಪ್ ಮೇಲೆ ಇದ್ದೇ ಇರುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮತ್ತೆ ಡಿಟೆಕ್ಟಿವ್ ದಿವಾಕರ್ ಅವತಾರದಲ್ಲಿ ರಿಷಬ್ ಶೆಟ್ಟಿ: ಬೆಲ್ ಬಾಟಂ 2 ಶುರು