ಮತ್ತೆ ಡಿಟೆಕ್ಟಿವ್ ದಿವಾಕರ್ ಅವತಾರದಲ್ಲಿ ರಿಷಬ್ ಶೆಟ್ಟಿ: ಬೆಲ್ ಬಾಟಂ 2 ಶುರು

ಶನಿವಾರ, 14 ಸೆಪ್ಟಂಬರ್ 2019 (11:54 IST)
ಬೆಂಗಳೂರು: ನಿರ್ದೇಶಕ ರಿಷಬ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ್ದ ಬೆಲ್ ಬಾಟಂ ಸಿನಿಮಾ ಭಾರೀ ಹಿಟ್ ಆಗಿತ್ತು. ಇದೀಗ ಬೆಲ್ ಬಾಟಂ 2 ತೆರೆಗೆ ಬರಲಿದೆ.


ರಿಷಬ್ ಶೆಟ್ಟಿ ಸದ್ಯಕ್ಕೆ ತಮ್ಮ ರುದ್ರಪ್ರಯಾಗ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ಬಳಿಕ ಬೆಲ್ ಬಾಟಂ ಸಿನಿಮಾದ ಎರಡನೇ ಭಾಗದಲ್ಲಿ ಅಭಿನಯಸಲಿದ್ದಾರೆ.

ಈಗಾಗಲೇ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಈ ವರ್ಷದ  ಅಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ನಟನಾಗಿ ರಿಷಬ್ ಶೆಟ್ಟಿಗೆ ಹೊಸ ಇಮೇಜ್ ತಂದುಕೊಟ್ಟ ಸಿನಿಮಾ ಇದಾಗಿತ್ತು. ಬೆಲ್ ಬಾಟಂ ಸಿನಿಮಾ ಹಿಟ್ ಆದಾಗಲೇ ಎರಡನೇ ಭಾಗ ಮಾಡುವ ಬಗ್ಗೆ ಚಿತ್ರತಂಡ ಸುಳಿವುಕೊಟ್ಟಿತ್ತು.  ಅದೀಗ ನಿಜವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮತ್ತೊಂದು ವಿಶೇಷ ಸಿನಿಮಾಗೆ ನಾಯಕಿಯಾಗಲಿದ್ದಾರೆ ಹರಿಪ್ರಿಯಾ