Publish Date: Thu, 12 Sep 2019 (16:32 IST)
Updated Date: Thu, 12 Sep 2019 (16:35 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಭರ್ಜರಿ ಓಪನಿಂಗ್ ಕಂಡಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನವೇ ಉತ್ತಮ ಗಳಿಕೆ ಮಾಡಿದೆ.
ಹಿಂದಿ ವರ್ಷನ್ ನಾಳೆ ತೆರೆ ಕಾಣುತ್ತಿದೆ. ಆದರೆ ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಇಂದು ಬಿಡುಗಡೆಯಾಗಿದೆ. ಕಿಚ್ಚನ ಪೈಲ್ವಾನ್ ಅವತಾರಕ್ಕೆ ಪ್ರೇಕ್ಷಕರು ಪೂರ್ಣ ಅಂಕ ಕೊಟ್ಟಿದ್ದಾರೆ.
ಈ ಸಿನಿಮಾ ಮೊದಲ ದಿನದ ಗಳಿಕೆ ಕನ್ನಡದಲ್ಲಿ 7.8 ಕೋಟಿ ರೂ. ಎನ್ನಲಾಗಿದೆ. ತೆಲುಗು ಮತ್ತು ತಮಿಳಿನಲ್ಲಿ 1 ಕೋಟಿ ರೂ. ಕಲೆಕ್ಷನ್ ಮಾಡಿದ ಸುದ್ದಿ ಬಂದಿದೆ. ಇದರೊಂದಿಗೆ ಕನ್ನಡ ಸಿನಿಮಾಗಳ ಪೈಕಿ ಮೊದಲ ದಿನ ಹೆಚ್ಚು ಗಳಿಕೆ ಮಾಡಿದ ಟಾಪ್ 5 ಸಿನಿಮಾಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಕೆಜಿಎಫ್ 15.5 ಕೋಟಿ ರೂ. ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಈಗ ಪೈಲ್ವಾನ್ ನಾಲ್ಕನೇ ಸ್ಥಾನ ಪಡೆದಿದೆ. ವಾರಂತ್ಯದಲ್ಲಿ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆಯಿದೆ.