ಪೈಲ್ವಾನ್ ನೋಡಿದ ಟ್ವಿಟರಿಗರ ರಿವ್ಯೂ ಇಲ್ಲಿದೆ

ಗುರುವಾರ, 12 ಸೆಪ್ಟಂಬರ್ 2019 (10:14 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆಯಾಗಿದ್ದು, ಮೊದಲ ಶೋ ವೀಕ್ಷಿಸುತ್ತಿರುವ ಪ್ರೇಕ್ಷಕರು ಆಗಲೇ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

 

ಮೊದಲ ಹಾಫ್ ನಲ್ಲಿ ಕಿಚ್ಚ ಮತ್ತು ಆಕಾಂಕ್ಷ ಸಿಂಗ್ ನಡುವಿನ ರೊಮ್ಯಾನ್ಸ್, ಕಿಚ್ಚನ ಕುಸ್ತಿ ಸೀನ್ ಗಳು ಅದ್ಭುತವಾಗಿದೆ. ಆಕಾಂಕ್ಷ ಉತ್ತಮವಾಗಿ ನಟಿಸಿದ್ದಾರೆ ಎಂಬಿತ್ಯಾದಿ ಅಭಿಪ್ರಾಯವನ್ನು ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.

ತೆಲುಗಿನಲ್ಲೂ ಕಿಚ್ಚನೇ ಡಬ್ ಮಾಡಿರುವುದರಿಂದ ವಾಯ್ಸ್ ಸೂಪರ್ ಆಗಿದೆ. ಫಸ್ಟ್ ಹಾಫ್ ನಲ್ಲಿ ಚಿತ್ರ ಅಷ್ಟೊಂದು ವೇಗ ಪಡೆದಿಲ್ಲ. ಬಹುಶಃ ಸೆಕೆಂಡ್ ಹಾಫ್ ನಲ್ಲಿ ಕತೆ ವೇಗ ಪಡೆಯಬಹುದು ಎಂಬುದು ಪ್ರೇಕ್ಷಕರ ನಿರೀಕ್ಷೆ. ಕತೆ ಕೊಂಚ ನಿಧಾನವಾಗಿದ್ದರೂ ಅದನ್ನೆಲ್ಲಾ ಕಿಚ್ಚ ಸುದೀಪ್ ತಮ್ಮ ಅದ್ಭುತ  ಅಭಿನಯದಿಂದ ಸರಿದೂಗಿಸಿದ್ದಾರೆ. ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಮ್ಮೆ ನೋಡಲು ಅಡ್ಡಿಯಿಲ್ಲ ಎನ್ನುವುದು ಪ್ರೇಕ್ಷಕನ  ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಲ್ಮಾನ್ ಖಾನ್ ಕನ್ನಡ ಮಾತಿಗೆ ಕಿಚ್ಚ ಸುದೀಪ್ ಫಿದಾ