Select Your Language

Notifications

webdunia
webdunia
webdunia
webdunia

ಡಾ. ರಾಜ್ ಎಂದರೆ ಎಲ್ಲಾ ನಟರ ಚಕ್ರವರ್ತಿ ಇದ್ದ ಹಾಗೆ ಎಂದ ಅನಿಲ್ ಕಪೂರ್

ಡಾ. ರಾಜ್ ಎಂದರೆ ಎಲ್ಲಾ ನಟರ ಚಕ್ರವರ್ತಿ ಇದ್ದ ಹಾಗೆ ಎಂದ  ಅನಿಲ್ ಕಪೂರ್
ಬೆಂಗಳೂರು , ಗುರುವಾರ, 12 ಸೆಪ್ಟಂಬರ್ 2019 (11:20 IST)
ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಎಂದರೆ ಎಲ್ಲಾ ನಟರಿಗೂ ಚಕ್ರವರ್ತಿ ಇದ್ದ ಹಾಗೆ ಎಂದು ಬಾಲಿವುಡ್ ನಟ ಅನಿಲ್ ಕಪೂರ್ ಗುಣಗಾನ ಮಾಡಿದ್ದಾರೆ.


ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನಿಲ್ ಕಪೂರ್ ಡಾ. ರಾಜ್ ಹೊಗಳಿದ್ದಾರೆ. ರಾಜ್ ಕುಮಾರ್ ಎಂದರೆ ಕೇವಲ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ಭಾರತೀಯ ಸಿನಿಮಾ ರಂಗಕ್ಕೆ ಆಸ್ತಿ ಎಂದು ಅನಿಲ್ ಕಪೂರ್ ಬಣ್ಣಿಸಿದ್ದಾರೆ.

‘ರಾಜ್ ಕುಮಾರ್ ಕೇವಲ ರಾಜ್ ಕುಮಾರ್ ಅಲ್ಲ.  ಅವರು ಎಲ್ಲಾ ನಟರಿಗೆ ಚಕ್ರವರ್ತಿ ಇದ್ದ ಹಾಗೆ. ಅವರು ಭಾರತೀಯ ಸಿನಿಮಾ ರಂಗಕ್ಕೆ ಸಾಕಷ್ಟು ಕೊಡುಗೆ ಸಲ್ಲಿಸಿದ್ದಾರೆ. ಅವರು ಮಾಡಿಟ್ಟು ಹೋದ ಹೆಸರು ಕೇವಲ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ಭಾರತೀಯ ಸಿನಿಮಾ ರಂಗಕ್ಕೆ ಆಸ್ತಿಯಿದ್ದಂತೆ ಎಂದು ಅನಿಲ್ ಕಪೂರ್ ಬಣ್ಣಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಗಾಗಿ ಪೈಲ್ವಾನ್ ಸ್ಪೆಷಲ್ ಪ್ರದರ್ಶನ