ಶ್ರೀಲಂಕಾ ಕ್ರಿಕೆಟಿಗರ ಪ್ರವಾಸ ತಡೆ ಹಿಡಿದಿದ್ದು ಭಾರತವಂತೆ! ಪಾಕ್ ಸಚಿವನ ಹೇಳಿಕೆ

ಬುಧವಾರ, 11 ಸೆಪ್ಟಂಬರ್ 2019 (09:16 IST)
ಇಸ್ಲಾಮಾಬಾದ್: ಶ್ರೀಲಂಕಾ ಕ್ರಿಕೆಟಿಗರು ಪಾಕಿಸ್ತಾನದಲ್ಲಿ ನಡೆಯಲಿರುವ ಏಕದಿನ ಸರಣಿಗೆ ತೆರಳದಂತೆ ತಡೆಹಿಡಿಯುತ್ತಿರುವುದು ಭಾರತವಂತೆ! ಹೀಗಂತ ಪಾಕಿಸ್ತಾನದ ಸಚಿವ ಫವಾದ್ ಹುಸೇನ್ ಆರೋಪಿಸಿದ್ದಾರೆ.


ಶ್ರೀಲಂಕಾ ತಂಡ ಏಕದಿನ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಬೇಕಿದೆ. ಆದರೆ 2009 ರಲ್ಲಿ ತಂಡದ ಮೇಲೆ ಉಗ್ರರ ದಾಳಿ ನಡೆದ ಕಾರಣಕ್ಕೆ ಲಂಕಾ ಕ್ರಿಕೆಟಿಗರು ಈಗಲೂ ಪಾಕ್ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ 10 ಪ್ರಮುಖ ಆಟಗಾರರು ಪಾಕ್ ಗೆ ತೆರಳುವುದಿಲ್ಲ ಎಂದು ನಿರ್ಧರಿಸಿದ್ದಾರೆ.

ಇದು ಪಾಕಿಸ್ತಾನಕ್ಕೆ ಮುಖಭಂಗವುಂಟುಮಾಡಿದೆ. ಇದರ ಬೆನ್ನಲ್ಲೇ ಪಾಕ್ ಸಚಿವ ಫವಾದ್ ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನಕ್ಕೆ ತೆರಳಿದರೆ ಐಪಿಎಲ್ ಗೆ ಸೇರಿಸಿಕೊಳ್ಳುವುದಿಲ್ಲ ಎಂದು ಲಂಕಾ ಕ್ರಿಕೆಟಿಗರಿಗೆ ಭಾರತ ಬೆದರಿಸಿದೆ ಎಂದು ಕಾಮೆಂಟೇಟರ್ ಒಬ್ಬರು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನವನ್ನು ಮೂಲೆಗುಂಪು ಮಾಡಲು ಭಾರತ ನಡೆಸುತ್ತಿರುವ ಪ್ರಯತ್ನ ನಿಜವಾದರೆ ಅದನ್ನು ನಾವು ಖಂಡಿಸುತ್ತೇವೆ’ ಎಂದು ಫವಾದ್ ಟ್ವೀಟ್ ಮೂಲಕ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟೀಂ ಇಂಡಿಯಾ ಕ್ರಿಕೆಟಿಗರ ಚಿಂತೆ ಹೆಚ್ಚಿಸಲಿದೆ ಕೋಚ್ ರವಿಶಾಸ್ತ್ರಿ ಈ ನಿರ್ಧಾರ!