ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹಳೆಯ ಪಂದ್ಯವೊಂದರ ಮೆಲುಕು ಹಾಕಿದ್ದಾರೆ.
2016 ವಿಶ್ವಕಪ್ ಟಿ20 ಪಂದ್ಯದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯ ನಡೆದ ದಿನವಾದ ಇಂದಿನ ದಿನವನ್ನು ಕೊಹ್ಲಿ ನೆನಪಿಸಿಕೊಂಡಿದ್ದು ಆವತ್ತು ಧೋನಿ ಜತೆಗೂಡಿ 82 ರನ್ ಗಳಿಸಿ ಭಾರತವನ್ನು ಗೆಲ್ಲಿಸಿದ ಘಟನೆಯನ್ನು ನೆನಪಿಸಿದ್ದಾರೆ.
‘ಈ ಪಂದ್ಯವನ್ನು ನಾನು ಯಾವತ್ತೂ ಮರೆಯಲಾರೆ. ಅದು ವಿಶೇಷ ರಾತ್ರಿಯಾಗಿತ್ತು. ಆವತ್ತು ನನ್ನನ್ನು ಈ ಮನುಷ್ಯ ಪಿಚ್ ನಲ್ಲಿ ಫಿಟ್ನೆಸ್ ಟೆಸ್ಟ್ ಮಾಡಿಸಿದ ಹಾಗೆ ಓಡಿಸಿದರು. ಮಹಿ..’ ಎಂದು ಕೊಹ್ಲಿ ಅಂದು ಭಾರತ ಗೆದ್ದ ಕ್ಷಣದ ಫೋಟೋ ಪ್ರಕಟಿಸಿದ್ದಾರೆ.