Select Your Language

Notifications

webdunia
webdunia
webdunia
webdunia

ಮತ್ತೊಂದು ವಿಶೇಷ ಸಿನಿಮಾಗೆ ನಾಯಕಿಯಾಗಲಿದ್ದಾರೆ ಹರಿಪ್ರಿಯಾ

ಮತ್ತೊಂದು ವಿಶೇಷ ಸಿನಿಮಾಗೆ ನಾಯಕಿಯಾಗಲಿದ್ದಾರೆ ಹರಿಪ್ರಿಯಾ
ಬೆಂಗಳೂರು , ಶನಿವಾರ, 14 ಸೆಪ್ಟಂಬರ್ 2019 (11:30 IST)
ಬೆಂಗಳೂರು: ನಟಿ ಹರಿಪ್ರಿಯಾ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ ಹಲವು ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇದೀಗ ಮತ್ತೊಂದು ವಿಶೇಷ ಪಾತ್ರಕ್ಕೆ ರೆಡಿಯಾಗುತ್ತಿದ್ದಾರೆ.


ಕೆಲವು ದಿನಗಳ ಬ್ರೇಕ್ ನ ನಂತರ ಚಿತ್ರರಂಗಕ್ಕೆ ಮರಳಿರುವ ಹರಿಪ್ರಿಯಾ ಈಗ ಅಮೃತಮತಿ ಎನ್ನುವ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಹರಿಪ್ರಿಯಾ 13 ನೇ ಶತಮಾನದ ಮಹಿಳೆಯ ಪಾತ್ರ ಮಾಡುತ್ತಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ಅಮೃತಮತಿ ಸಿನಿಮಾ ಮಹಾ ಕವಿ ಜನ್ನ ವಿರಚಿತ ಯಶೋಧರ ಚರಿತೆಯ ಆಧಾರವಾಗಿಟ್ಟುಕೊಂಡ ಕತೆಯಾಗಿದೆ. ಇದು ತನ್ನ ವೃತ್ತಿಜೀವನದ ಸ್ಮರಣೀಯ ಸಿನಿಮಾಗಲಿದೆ ಎಂಬ ನಿರೀಕ್ಷೆಯಲ್ಲಿ ಹರಿಪ್ರಿಯಾ ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ಕೋಟ್ಯಾಧಿಪತಿ ಈ ಸೀಸನ್ ನ ದಾಖಲೆ ಮಾಡುತ್ತಿರುವ ಸ್ಪರ್ಧಿ