Publish Date: Sat, 14 Sep 2019 (11:07 IST)
Updated Date: Sat, 14 Sep 2019 (11:10 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಈ ವಾರ ಈ ಸೀಸನ್ ನ ಹೊಸ ದಾಖಲೆಯಾಗಲಿದೆ.
ಇದುವರೆಗೆ ಹಲವು ಸ್ಪರ್ಧಿಗಳು, ಸೆಲೆಬ್ರಿಟಿಗಳು ತಮ್ಮದೇ ಕಾರಣಕ್ಕಾಗಿ ಆಡಿ ತಮಗೆ ಸಾಧ್ಯವಾದಷ್ಟು ಮೊತ್ತ ಗೆದ್ದುಕೊಂಡು ಹೋಗಿದ್ದಾರೆ. ಆದರೆ ಈ ವಾರ ಈ ಸೀಸನ್ ನಲ್ಲೇ ಹೊಸ ದಾಖಲೆಯಾಗಲಿದೆ.
ಅನುರಾಧ ಎನ್ನುವ ಸ್ಪರ್ಧಿ ಈ ಸೀಸನ್ ನಲ್ಲೇ ಅತೀ ಹೆಚ್ಚು ಮೊತ್ತ ಗೆಲ್ಲುವ ಹಂತದಲ್ಲಿದ್ದಾರೆ. ಇದುವರೆಗೆ ಬಂದ ಸ್ಪರ್ಧಿಗಳು ಗರಿಷ್ಠವೆಂದರೆ 12 ಲಕ್ಷದ 50 ಸಾವಿರ ಗೆದ್ದುಕೊಂಡು ಹೋಗಿದ್ದಾರೆ. ಆದರೆ ಅನುರಾಧ 25 ಲಕ್ಷದ ಪ್ರಶ್ನೆ ಎದುರಿಸುತ್ತಿದ್ದಾರೆ. ಅದನ್ನು ಅವರು ಗೆದ್ದು ದಾಖಲೆಯ ಮೊತ್ತ ಗೆಲ್ಲುತ್ತಾರೋ ಅಥವಾ ಅವರ ಆತ್ಮವಿಶ್ವಾಸ ಅವರಿಗೇ ಮುಳುವಾಗುತ್ತಾ ಎಂದು ತಿಳಿಯಬೇಕಾದರೆ ಈ ವಾರದ ಸಂಚಿಕೆ ನೋಡಲೇಬೇಕು.