Publish Date: Fri, 13 Sep 2019 (09:29 IST)
Updated Date: Fri, 13 Sep 2019 (09:33 IST)
ನವದೆಹಲಿ: ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಇತ್ತೀಚೆಗಷ್ಟೇ ನಿಧನರಾದ ಡೆಲ್ಲಿ ಕ್ರಿಕೆಟ್ ಸಂಸ್ಥೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಹೆಸರಿನಿಂದ ಮರುನಾಮಕರಣ ಮಾಡಲಾಗಿದೆ.
ನಿನ್ನೆ ನಡೆದ ಸಮಾರಂಭದಲ್ಲಿ ಗೃಹಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿದ್ದರು. ಅಲ್ಲದೆ, ಕ್ರಿಕೆಟ್ ದಿಗ್ಗಜರು, ಅರುಣ್ ಜೇಟ್ಲಿ ಕುಟುಂಬಸ್ಥರು ಪಾಲ್ಗೊಂಡಿದ್ದರು. ದೆಹಲಿಯ ಅನೇಕ ಕ್ರಿಕೆಟಿಗರ ಭವಿಷ್ಯ ರೂಪಿಸಿದ ನಾಯಕ ಅರುಣ್ ಜೇಟ್ಲಿ ಆಗಿದ್ದಾರೆ. ಇದೇ ಕಾರಣಕ್ಕೆ ಅವರರ ಹೆಸರಿನಿಂದ ಮೈದಾನವನ್ನು ಮರುನಾಮಕರಣ ಮಾಡಲಾಗಿದೆ.
ಅರುಣ್ ಜೇಟ್ಲಿ ಕುರಿತಾದ ವಿಡಿಯೋ ವೇದಿಕೆಯಲ್ಲಿ ಪ್ಲೇ ಆಗುತ್ತಿದ್ದಂತೆ ಜೇಟ್ಲಿ ಪತ್ನಿ ಸೇರಿದಂತೆ ಅಲ್ಲಿದ್ದ ಕುಟುಂಬಸ್ಥರು ಭಾವುಕರಾದರು. ಇದೇ ವೇಳೆ ದೆಹಲಿ ಮೈದಾನದ ಒಂದು ಸ್ಟ್ಯಾಂಡ್ ಗೆ ನಾಯಕ ವಿರಾಟ್ ಕೊಹ್ಲಿ ಹೆಸರಿಡಿಲಾಯಿತು. ಅಲ್ಲದೆ ದೆಹಲಿ ಮೂಲದ ಕ್ರಿಕೆಟಿಗರಿಗೆ ಸನ್ಮಾನವನ್ನೂ ಮಾಡಲಾಯಿತು.