Publish Date: Fri, 04 Oct 2019 (10:37 IST)
Updated Date: Fri, 04 Oct 2019 (10:38 IST)
ಬೆಂಗಳೂರು: ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ನೆರೆ ಪರಿಹಾ ವಿಚಾರದಲ್ಲಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಈಗ ತಮ್ಮ ಪಕ್ಷದ ಬೆಂಬಲಿಗರಿಂದಲೇ ಟೀಕೆಗೊಳಗಾಗಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಮತ್ತು ಪ್ರಧಾನಿ ಮೋದಿ ಆಸಕ್ತಿ ತೋರುತ್ತಿಲ್ಲ ಎಂದಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಸದಾನಂದ ಗೌಡರು ಹಾರಿಕೆಯ ಸುದ್ದಿ ಹರಡುವವರು ದೇಶದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದರು ಎಂದು ಪರೋಕ್ಷವಾಗಿ ಸೂಲಿಬೆಲೆಯವರನ್ನು ದೇಶದ್ರೋಹಿಗೆ ಹೋಲಿಸಿದ್ದರು.
ಆದರೆ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಸೂಲಿಬೆಲೆ ವಿರುದ್ಧ ಈ ರೀತಿ ಮಾತನಾಡಿದ್ದು, ಬಿಜೆಪಿಯ ಬೆಂಬಲಿಗರಿಗೇ ಇಷ್ಟವಾಗಿಲ್ಲ. ಹೀಗಾಗಿ ಈಗ ಸಾಮಾಜಿಕ ಜಾಲತಾಣದಲ್ಲಿ ಸದಾನಂದ ಗೌಡರ ವಿರುದ್ಧ ಹಲವರು ಟೀಕಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಿಮ್ಮ ಪರವಾಗಿ ಪ್ರಚಾರ ಮಾಡಲು ಸೂಲಿಬೆಲೆ ಬೇಕಿತ್ತು. ಈಗ ಅವರು ದೇಶದ್ರೋಹಿಯಾಗುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿಗರೇ ಕಿಡಿ ಕಾರುತ್ತಿದ್ದಾರೆ.