ಕೇಂದ್ರ ಸಚಿವರು, ಸಂಸದರನ್ನು ಝಾಡಿಸಿದ ಬಿಜೆಪಿ ಶಾಸಕ

ಗುರುವಾರ, 3 ಅಕ್ಟೋಬರ್ 2019 (15:43 IST)

ಬಿಜೆಪಿಯ ಕೇಂದ್ರದ ಸಚಿವರು, ಮುಖಂಡರು, ರಾಜ್ಯದ ಸಂಸದರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಬಿಜೆಪಿ ಮುಖಂಡರ ವಿರುದ್ಧ ಗರಂ ಆಗಿದ್ದರೆ, ಚಿಂತಕ ಚಕ್ರವರ್ತಿ ಸೂಲಿಬೆಲೆ ಪರವಾಗಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಕೇಂದ್ರ ಸಚಿವರಾಗಿ ನೆರೆ ಪರಿಹಾರ ತರೋದನ್ನು ಬಿಟ್ಟು ಪ್ರಶ್ನೆ ಮಾಡಿದವರನ್ನೇ ದೂರುತ್ತಾ ಟ್ವೀಟ್ಟರ್ ನಲ್ಲೇ ಕಾಲ ಕಳೆಯುತ್ತಿದ್ದಾರೆ. ಮೋದಿ ಪರ ಸೂಲಿಬೆಲೆ ಅಭಿಮಾನ ಹೊಂದಿದ್ದಾರೆ. ಆದರೆ ರಾಜ್ಯದ ಸಂಸದರು ನೆರೆ ಪರಿಹಾರ ಬಿಡುಗಡೆಗೆ ಕೇಂದ್ರದ ಮೇಲೆ ಹಾಕುತ್ತಿಲ್ಲ ಅಂತೆಲ್ಲ ಟೀಕೆ ಮಾಡಿದ್ದಾರೆ.

ಇದೇ ವೇಳೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಲ್ಹಾದ್ ಜೋಶಿ, ಸಂಸದರು, ಸಚಿವ ಸಿ.ಟಿ.ರವಿ ವಿರುದ್ಧವೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸೋಲಾರ್ ಪ್ಲಾಂಟ್ ದಾಖಲೆ ಬಿಡುಗಡೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹ