Select Your Language

Notifications

webdunia
webdunia
webdunia
webdunia

ಬಿಜೆಪಿಯವರ ಜನ್ಮ ಜಾಲಾಡ್ತಾರಾ ಡಿಕೆ ಶಿವಕುಮಾರ್?

ಡಿಕೆ ಶಿವಕುಮಾರ್
ನವದೆಹಲಿ , ಮಂಗಳವಾರ, 1 ಅಕ್ಟೋಬರ್ 2019 (17:28 IST)
ಇಡಿ ಬಂಧನದಲ್ಲಿರೋ ಮಾಜಿ ಸಚಿವ ಡಿಕೆ ಶಿವಕುಮಾರ್ ಬಿಜೆಪಿ ಮುಖಂಡರ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.

ಬಿಜೆಪಿ ಮುಖಂಡರು ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಕಿಡಿಕಾರಿರೋ ಡಿಕೆಶಿ ಕಮಲ ಪಾಳೆಯದ ಮುಖಂಡರ ಬಂಡವಾಳವನ್ನ ಬಟಾ ಬಯಲು ಮಾಡುತ್ತೇನೆ. ಹೀಗಂತ ತಮ್ಮ ಸಂಗಡಿಗರ ಹತ್ತಿರ ಹೇಳಿಕೊಂಡಿದ್ದಾರಂತೆ.

 ಬಿ.ಎಸ್.ಯಡಿಯೂರಪ್ಪ ಈ ಹಿಂದೆ 20 ಲಕ್ಷಕ್ಕೆ ಕೊಂಡಿದ್ದ ಆಸ್ತಿ ಜಿಂದಾಲ್ ಗೆ 40 ಕೋಟಿಗೆ ಸೇಲ್ ಆಗಿದೆ. ಯಾರೋಬ್ಬರೂ ಮಾಡದ ತಪ್ಪನ್ನ ನಾನು ಮಾಡಿದ್ದೇನಾ ಅಂತೆಲ್ಲ ಕೇಳಿದ್ದಾರೆ.

ಆಸ್ತಿ ಬೆಲೆ ದುಪ್ಪಟ್ಟಾಗುತ್ತಿದೆ. ಹೀಗಾಗಿ ಬೆಲೆ ಹೆಚ್ಚಾಗುತ್ತಿದೆ ಎಂದಿದ್ದಾರೆ. ಅಕ್ಟೋಬರ್ 15 ರವರೆಗೆ ಇಡಿ ಬಂಧನದಲ್ಲಿ ಡಿಕೆಶಿ ಇರಲಿದ್ದಾರೆ.

ಆರೋಪ ಮುಕ್ತನಾಗಿ ಬಂದ ಮೇಲೆ ಬಿಜೆಪಿಯವರ ಬಂಡವಾಳ ಹೊರತೆಗೆಯುತ್ತೇನೆ ಅಂತ ಡಿಕೆಶಿ ಗುಟುರು ಹಾಕಿದ್ದಾರೆ ಅಂತೆಲ್ಲ ಸುದ್ದಿ ಹರಿದಾಡುತ್ತಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧಿ ಜಯಂತಿಗೆ ಈ ಕೆಲಸ ಮಾಡಲೇಬೇಕಂತ ಖಡಕ್ಕಾಗಿ ಹೇಳಿದ ಜಿಲ್ಲಾಧಿಕಾರಿ