Publish Date: Fri, 04 Oct 2019 (11:01 IST)
Updated Date: Fri, 04 Oct 2019 (11:04 IST)
ಬೆಂಗಳೂರು : ನೆರೆ ಸಂತ್ರಸ್ತರಿಗೆ ಇನ್ನು ಪರಿಹಾರ ಕೊಡಿಸದ ರಾಜ್ಯ ಬಿಜೆಪಿ ಸಂಸದರ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ.
ಪ್ರವಾಹ ಸಂತ್ರಸ್ತ ರೈತ ಚಂದ್ರೆಗೌಡ ಆತ್ಮಹತ್ಯೆ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದ ಬಿಜೆಪಿ ಸಂಸದರು ಪೇಪರ್ ಹುಲಿಗಳು. ಪ್ರವಾಹ ಪರಿಹಾರ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ರಾಜ್ಯದ ಪರ ಬ್ಯಾಟ್ ಬೀಸದವರು ಪೇಪರ್ ಹುಲಿಗಳು. ಪ್ರಧಾನಿಯವರ ಬಳಿ ಪರಿಹಾರ ಕೇಳಲು ಹೆದರುತ್ತಿರುವುದು ಏಕೆ? ರಾಜ್ಯದಲ್ಲಿ ಇನ್ನು ಎಷ್ಟು ನೆರೆ ಸಂತ್ರಸ್ತರು ಸಾಯಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
pavithra
Publish Date: Fri, 04 Oct 2019 (11:01 IST)
Updated Date: Fri, 04 Oct 2019 (11:04 IST)