Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಗಾಗಿ ಭರ್ಜರಿ ಬ್ರೇಕ್ ಫಾಸ್ಟ್, ಸಿದ್ದರಾಮಯ್ಯ ಮುಖದಲ್ಲಿ ನಗು

Siddaramaiah-DK Shivakumar
Photo Credit: X
ಬೆಂಗಳೂರು: ಡಿಕೆ ಶಿವಕುಮಾರ್ ರನ್ನು ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದ ಸಿಎಂ ಸಿದ್ದರಾಮಯ್ಯ ತಾವೇ ನಗು ಮೊಗದಿಂದ ಸ್ವಾಗತ ಮಾಡಿದ್ದಾರೆ.

ಇಂದು ಕಾವೇರಿ ನಿವಾಸದಲ್ಲಿ ಡಿಕೆ ಶಿವಕುಮಾರ್ ಜೊತೆ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಡಿಕೆಶಿ ಮನೆಗೆ ಬರುತ್ತಿದ್ದಂತೇ ಸ್ವತಃ ಸಿದ್ದರಾಮಯ್ಯನವರೇ ಬರಮಾಡಿಕೊಂಡಿದ್ದಾರೆ.

ಬಳಿಕ ಸ್ಪೆಷಲ್ ರೂಂಗೆ ಕರೆದೊಯ್ದು ಬ್ರೇಕ್ ಫಾಸ್ಟ್ ಮಾಡಿದ್ದಾರೆ. ಈ ವೇಳೆ ಡಿಕೆ ಜೊತೆಗೆ ಸಿದ್ದರಾಮಯ್ಯ ನಗುಮೊಗದಿಂದಲೇ ಫೋಟೋಗೆ ಪೋಸ್ ನೀಡಿದ್ದಾರೆ. ಬಳಿಕ ಇಬ್ಬರ ನಡುವೆ ರಹಸ್ಯ ಮಾತುಕತೆ ನಡೆದಿದೆ. ಈ ವೇಳೆ ಇಬ್ಬರನ್ನು ಬಿಟ್ಟು ಬೇರೆ ಯಾರಿಗೂ ಅವಕಾಶವಿರಲಿಲ್ಲ.

ಇಬ್ಬರ ಮುಖಭಾವ ಗಮನಿಸಿದರೆ ಈ ಮೀಟಿಂಗ್ ನಲ್ಲಿ ಎಲ್ಲಾ ಸಮಸ್ಯೆಗಳೂ ಬಗೆಹರಿಯಬಹುದು ಎಂಬ ವಿಶ್ವಾಸ ಮೂಡುತ್ತಿದೆ. ಮೀಟಿಂಗ್ ಗಾಗಿ ಸಿಎಂ ಮನೆ ಹೊರಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಜಿಡಿಪಿ ಶೇಕಡಾ 8.2 ಕ್ಕೆ ಏರಿಕೆ: ಸತ್ತ ಎಕಾನಮಿ ಎಂದ ಟ್ರಂಪ್ ಗೆ ಮುಖಭಂಗ