Daily Horoscope

Select Your Language

Notifications

webdunia
webdunia
webdunia
webdunia

ವೋಟ್ ಹಾಕಕ್ಕೆ ಮಾತ್ರ ನಾವು, ಸಿಎಂ ಆಗೋದು ಹೈಕಮಾಂಡ್ ನಿರ್ಧರಿಸುತ್ತಾ: ಸಿದ್ದರಾಮಯ್ಯಗೆ ನೆಟ್ಟಿಗರ ಕ್ಲಾಸ್

Siddaramaiah
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕುಸ್ತಿ ಕದನದ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದಿರುವ ಸಿಎಂ ಸಿದ್ದರಾಮಯ್ಯಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ರಾಜ್ಯದ ಕುಸ್ತಿ ಕದನಕ್ಕೆ ಬ್ರೇಕ್ ಹಾಕಲು ಇಂದು ಡಿಕೆ ಶಿವಕುಮಾರ್ ರನ್ನು ತಮ್ಮ ನಿವಾಸಕ್ಕೆ ಬ್ರೇಕ್ ಫಾಸ್ಟ್ ಗೆ ಆಹ್ವಾನಿಸಿರುವ ಸಿಎಂ ಸಿದ್ದರಾಮಯ್ಯ ಮೀಟಿಂಗ್ ನಡೆಸುತ್ತಿದ್ದಾರೆ. ಈ ಮೀಟಿಂಗ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿದ್ದರಾಮಯ್ಯ ಸಂದೇಶ ಹಂಚಿಕೊಂಡಿದ್ದಾರೆ.

ಇದಕ್ಕೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ನಿಮ್ಮ ಕಿತ್ತಾಟ  ನೋಡಿ ಮುಂದಿನ ಸಾರಿ ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬರಲು ಏನೂ ಕಷ್ಟಪಡೋದೇ ಬೇಡ. 10 ವರ್ಷ ಅಧಿಕಾರದಲ್ಲಿರುತ್ತದೆ ಎಂದು ಕೆಲವರು ಹೇಳಿದ್ದಾರೆ.

ಮತ್ತೆ ಕೆಲವರು ವೋಟ್ ಹಾಕಕ್ಕೆ ಮಾತ್ರ ನಾವು, ಸಿಎಂ ಯಾರಾಗಬೇಕು ಎಂದು ನಿಮ್ಮ ಹೈಕಮಾಂಡ್ ನಿರ್ಧರಿಸೋದಾ ಎಂದು ಪ್ರಶ್ನೆ ಮಾಡಿದ್ದಾರೆ. ಇಬ್ಬರೂ ನಾಯಕರು ಹೈಕಮಾಂಡ್ ಹೇಳಿದ್ದಕ್ಕೆ ಒಪ್ಪುತ್ತೇವೆ ಅಂತೀರಿ. ಹಾಗಿದ್ದರೆ ಹೈಕಮಾಂಡ್ ಒಂದು ಮಾತು ಹೇಳಿದ್ರೆ ಮುಗೀತು ಅಲ್ವಾ? ಯಾಕೆ ನಿಮ್ಮ ಹೈಕಮಾಂಡ್ ಏನೂ ಹೇಳಲ್ಲ? ಯಾಕಿಷ್ಟು ಕಿತ್ತಾಟ ಎಂದು ಪ್ರಶ್ನೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬ್ರೇಕ್ ಫಾಸ್ಟ್ ಮೀಟಿಂಗ್ ರಹಸ್ಯ ಕಾಪಾಡಲು ಸೂಪರ್ ಐಡಿಯಾ ಮಾಡಿದ ಸಿಎಂ ಸಿದ್ದರಾಮಯ್ಯ