Publish Date: Sat, 29 Nov 2025 (09:48 IST)
Updated Date: Sat, 29 Nov 2025 (09:51 IST)
ಬೆಂಗಳೂರು: ಹೈಕಮಾಂಡ್ ಅಣತಿ ಹಿನ್ನಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಡಿಕೆ ಶಿವಕುಮಾರ್ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸುತ್ತಿದ್ದಾರೆ. ಆದರೆ ಈ ಮೀಟಿಂಗ್ ರಹಸ್ಯ ಕಾಪಾಡಲು ಸಿದ್ದು ಸೂಪರ್ ಐಡಿಯಾ ಮಾಡಿದ್ದಾರೆ.
ಇಂದು ಬೆಳಿಗ್ಗೆ 9.30 ಕ್ಕೆ ಬ್ರೇಕ್ ಫಾಸ್ಟ್ ಗೆ ಮನೆಗೆ ಬನ್ನಿ ಎಂದು ಸಿಎಂ ಸಿದ್ದರಾಮಯ್ಯ ನಿನ್ನೆಯೇ ಡಿಕೆ ಶಿವಕುಮಾರ್ ಗೆ ಆಹ್ವಾನವಿತ್ತಿದ್ದರು. ಹೈಕಮಾಂಡ್ ಸೂಚನೆ ನೀಡಿರುವ ಕಾರಣಕ್ಕೆ ಡಿಕೆ ಶಿವಕುಮಾರ್ ಕೂಡಾ ಇಂದು ಮೀಟಿಂಗ್ ಗೆ ಬರಲು ಒಪ್ಪಿಕೊಂಡಿದ್ದರು.
ಇದರ ಬಗ್ಗೆ ಸ್ವತಃ ಸಿಎಂ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದರು. ಸಹಜವಾಗಿಯೇ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ಮಾಧ್ಯಮಗಳು, ಸಾರ್ವಜನಿಕರು ಕುತೂಹಲದಿಂದ ನೋಡುತ್ತಿದ್ದಾರೆ. ಆದರೆ ಇಲ್ಲಿ ನಡೆಯುವ ಮಾತುಕತೆ ವಿವರ ಲೀಕ್ ಆಗದಂತೆ ನೋಡಿಕೊಳ್ಳುವುದು ಮುಖ್ಯವಾಗಿತ್ತು.
ಈ ಕಾರಣಕ್ಕೆ ಇಂದು ಸಿಎಂ ಅಧಿಕೃತ ನಿವಾಸದಲ್ಲಿ ತೀರಾ ಅಗತ್ಯವಿರುವ ಸಿಬ್ಬಂದಿಗಳನ್ನು ಮಾತ್ರ ಬರಲು ಹೇಳಲಾಗಿದೆ. ಉಳಿದ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಹಾಜರಾಗದೇ ಇರಲು ಸೂಚಿಸಲಾಗಿದೆ. ಹೀಗಾಗಿ ಇಂದು ಕಾವೇರಿ ನಿವಾಸದಲ್ಲಿ ಬೆರಳಣಿಕೆಯ ಸಿಬ್ಬಂದಿ ಮಾತ್ರ ಇದ್ದಾರೆ. ಸಿಬ್ಬಂದಿಗಳಿಂದಲೇ ವಿಷಯ ಲೀಕ್ ಆದರೆ ಎಂಬ ಭಯಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.