Select Your Language

Notifications

webdunia
webdunia
webdunia
webdunia

ಕ್ಷಮೆ ಕೇಳುವ ಸೌಜನ್ಯ ಡಿಕೆಶಿ, ಸಿದ್ದುಗಿಲ್ಲ- ಈಶ್ವರಪ್ಪ..!

Courtesy Dkeshi to apologize
shivamoga , ಶುಕ್ರವಾರ, 19 ಆಗಸ್ಟ್ 2022 (18:12 IST)
ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ವಿಚಾರ ಕುರಿತು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದ್ದಾರೆ. ನಾವು ತಪ್ಪು ಮಾಡಿದರೆ ಅವರು ತಿದ್ದುವ ಪ್ರಯತ್ನ ಮಾಡಬೇಕು. ಅವರು ತಪ್ಪು ಮಾಡಿದರೆ ಅವರಿಗೆ ನಾವು ಹೇಳುವ ಪ್ರಯತ್ನ ಮಾಡ್ತೇವೆ, ಇದೇ ರಾಜಕಾರಣ ಎಂದರು. ಈ ಬಗ್ಗೆ ಸಿಎಂ ಹಾಗೂ ಯಡಿಯೂರಪ್ಪ ಈ ರೀತಿ ಮಾಡಬೇಡಿ ಅಂತಾ ಹೇಳಿದ್ದಾರೆ. ಹೀಗಾಗಿ ನಾನೇನು ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ರಾಜಕಾರಣ ಅಂದ ಮೇಲೆ ಟ್ವೀಟ್ ವಾರ್ ನಡೆಯುತ್ತದೆ. ಎದುರೆದುರು ಟೀಕೆ ಮಾಡಿಕೊಳ್ಳುತ್ತೇವೆ.
ಒಬ್ಬರಿಗೊಬ್ಬರು ಹೊಗಳಿಕೊಳ್ಳಲು ರಾಜಕಾರಣ ಅಂದ್ರೆ ಏನು? ನಾವು ಅವರಿಗೆ ಬೈಯುವುದು, ಅವರು ನಮಗೆ ಬೈಯುವುದು ಇದೇ ರಾಜಕಾರಣ. ನಾವು ಮಾಡಿದ ಕೆಲಸವನ್ನೆಲ್ಲಾ ಹೊಗಳುತ್ತಾರಾ ಅವರು. ಅವರು ಮಾಡಿದ ಕೆಲಸವನ್ನೆಲ್ಲಾ ನಾವು ಹೊಗಳಿದ್ದೇವಾ....? ಆಡಳಿತ ದೃಷ್ಟಿಯಿಂದ ಒಳ್ಳೆಯದನ್ನ ಟೀಕಿಸಿದರೆ ತೆಗೆದುಕೊಳ್ಳುತ್ತೇವೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಗಂಡ ಸಾವರ್ಕರ್ ಪೋಟೋ ಹರಿದು ಹಾಕಿರೋದು ನೇರವಾಗಿ ಕಾಣ್ತಿದೆ. ಇದು ಗೊತ್ತಿದ್ದರೂ ಒಂದು ಕ್ಷಮೆ ಕೇಳುವ ಸೌಜನ್ಯ ಡಿಕೆಶಿ, ಸಿದ್ದರಾಮಯ್ಯ ಅವರಿಗಿಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕುಶಾಲನಗರದಲ್ಲಿ ಬಿಜೆಪಿಯ 9 ಮಂದಿಯ ವಿಚಾರಣೆ