Publish Date: Sat, 30 Jul 2022 (13:23 IST)
Updated Date: Sat, 30 Jul 2022 (14:21 IST)
ಶಿವಮೊಗ್ಗ : ಸಿದ್ದರಾಮಯ್ಯ ಅವರಿಗೆ ನಾಚಿಕೆ ಮಾನ, ಮರ್ಯಾದೆ ಇದೆಯಾ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಪರಿಹಾರದ ಬಿಕ್ಕಟ್ಟು ಗಲಭೆಗೆ ಕಾರಣವೆಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತಂತೆ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಇಂತಹ ಕೆಟ್ಟ ಮುಖ್ಯಮಂತ್ರಿ ಅವರನ್ನು ಕೊಟ್ಟಿದ್ದೇವಲ್ಲ ಅಂತ ಬಹಳ ಬೇಸರ ಆಯಿತು.
ಸಿದ್ದರಾಮಯ್ಯ ಅವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ? ಪಾಕಿಸ್ತಾನ ಮಾಡಿದ ದಾಳಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಭಾರತದ ಸುದ್ದಿಗೆ ಬರದ ರೀತಿ ಮಾಡಿದ್ದು ಮೋದಿ. ದೇಶದ ಮೇಲೆ ಆಘಾತವಾದಾಗ, ವಿಕೋಪವಾದಾಗ ಆರ್ಎಸ್ಎಸ್ ಸ್ವಯಂ ಸೇವಕರು ಶ್ರಮ ಪಟ್ಟಿದ್ದಾರೆ.
ಸ್ವಯಂ ಸೇವಕರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಏನು ಗೊತ್ತಿಲ್ಲ. ಆರ್ಎಸ್ಎಸ್ ಪಾದದ ಧೂಳಿಗೂ ಸಿದ್ದರಾಮಯ್ಯ ಸಮವಿಲ್ಲ. ದೇಶದ ಜನರ ಕ್ಷಮೆ ಕೇಳಬೇಕು. ರಾಷ್ಟ್ರದ್ರೋಹಿಗಳಿಗೆ ಇದುವರೆಗೂ ರಕ್ಷಣೆ ಕೊಡುತ್ತಾ ಬಂದಿರುವುದು ನೀವು ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಂದೆರಡು ದಿನ ಆರ್ಎಸ್ಎಸ್ ಶಾಖೆಗೆ ಬನ್ನಿ. ನಾನೇ ನಿಮ್ಮನ್ನು ಶಾಖೆಗೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿನ ಚಟುವಟಿಕೆ ತಿಳಿದುಕೊಳ್ಳಿ. ಆರ್ಎಸ್ಎಸ್ ಬಗ್ಗೆ ಮಾತನಾಡಿರುವ ನಿಮ್ಮ ನಾಲಿಗೆಯನ್ನು ಮೊದಲು ತೊಳೆದುಕೊಳ್ಳಿ. ನೀವು ಡಿಕೆಶಿ ಸೇರಿಕೊಂಡು ಜಾತೀಯತೆ ತೇಪೆ ಹಚ್ಚಿ ಬಿಟ್ಟಿದ್ದೀರಾ.
ನಿಮ್ಮ ರಾಜಕೀಯ ತೆವಲುಗಳಿಗೆ ಜಾತಿಯನ್ನು ತಂದಿಟ್ಟಿದ್ದೀರಿ. ಕುಡುಕರು ಮಾತನಾಡಿದ ರೀತಿ ಮಾತನಾಡುವುದು ಸರಿಯಲ್ಲ. ಶಾಖೆಗೆ ಬಂದು ಅಲ್ಲಿ ಇಂತಹ ತಪ್ಪಿದೆ. ಅಂತಹ ತಪ್ಪಿದೆ ಅಂದರೆ ನಾನು ಆಗ ಕೇಳುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
Ramya kosira
Publish Date: Sat, 30 Jul 2022 (13:23 IST)
Updated Date: Sat, 30 Jul 2022 (14:21 IST)