Publish Date: Sat, 23 Jul 2022 (18:48 IST)
Updated Date: Sat, 23 Jul 2022 (18:50 IST)
ಗುತ್ತಿಗೆದಾರ ಸಂತೋಷ್ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಕೆ.ಎಸ್ಈಶ್ವರಪ್ಪಗೆ ರಿಲೀಫ್ ನೀಡಲಾಗಿದೆ. ಹೀಗಾಗಿ ಸರ್ಕಾರ ವಿರುದ್ಧ ಆಪ್ ಕಾರ್ಯಕರ್ತರು ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.ಇನ್ನು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ ಆಫ್ ಕಾರ್ಯಕರ್ತರು ಈಶ್ವರಪ್ಪ ವಿರುದ್ಧ ಮರು ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದಾರೆ.ಇನ್ನು ಇದೇ ವೇಳೆ ಸರ್ಕಾರದ ವಿರುದ್ಧ ಫ್ಲೆಕ್ಸ್ ಹಿಡಿದು, ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.ಮೃತ ಸಂತೋಷ್ ಪಾಟೀಲ್ಗೆ ನ್ಯಾಯ ಕೊಡಿಸುವಂತೆ ಆಗ್ರಹಪಡಿಸಿದ್ದಾರೆ.ಅಷ್ಟೇ ಅಲ್ಲದೆ ವ್ಯಾಪಕ ಅಕ್ರೋಶ ಹೊರಹಾಕಿದ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಕೂಡಲೇ ಸೂಕ್ತ ತನಿಖೆ ಮಡೆಸಬೇಕು ಇಲ್ಲವಾದಲಿ ಉಗ್ರಮಟ್ಟದ ಹೋರಾಟದ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.