Select Your Language

Notifications

webdunia
webdunia
webdunia
webdunia

18 ವರ್ಷಕ್ಕೆ ಮುನ್ನವೇ ಮತದಾರ ಆಗಲು ಅರ್ಜಿಗೆ ಅವಕಾಶ

18 ವರ್ಷಕ್ಕೆ ಮುನ್ನವೇ ಮತದಾರ ಆಗಲು ಅರ್ಜಿಗೆ ಅವಕಾಶ
bangalore , ಶನಿವಾರ, 30 ಜುಲೈ 2022 (13:11 IST)
18 ವರ್ಷಕ್ಕೂ ಮುನ್ನವೇ ಇನ್ನು ಮುಂದೆ ಮತದಾರರು ಅರ್ಜಿ ಸಲ್ಲಿಸಬಹುದು. ಹೌದು, 17 ವರ್ಷ ತುಂಬಿದ ಮತದಾರರು ಮತದಾರರ ಪಟ್ಟಿಗೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸಬಹುದು. ಈವರೆಗೆ 18 ತುಂಬಿದವರಿಗೆ ಮಾತ್ರ ಈ ಅವಕಾಶವಿತ್ತು. ಚುನಾವಣಾ ಆಯೋಗ ಈ ಮಹತ್ತರ ಬದಲಾವಣೆ ಮಾಡಿದೆ. ಮತದಾನ ಪ್ರಕ್ರಿಯೆಯಲ್ಲಿ ಯುವಸಮೂಹ ಹೆಚ್ಚು ತೊಡಗುವಂತಾಗಲು ಚುನಾವಣಾ ಆಯೋಗವು ಮತದಾರರ ನೋಂದಣಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ತಂದಿದೆ. 17 ದಾಟಿದ ಹಾಗೂ ಇನ್ನೂ 18 ವರ್ಷವಾಗದ ಯುವಕ/ಯುವತಿಯರು ಮತದಾರರಾಗಿ ನೋಂದಣಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಂದ 18 ತುಂಬಿದ ನಂತರ ಬರುವ ಮೊದಲ ಚುನಾವಣೆಯಲ್ಲೇ ಇವರಿಗೆ ಮತ ಹಾಕಲು ಅವಕಾಶ ಲಭಿಸಲಿದೆ. ಈವರೆಗೆ ಜನವರಿ 1 ಅಥವಾ ಅದಕ್ಕಿಂತ ಮೊದಲು 18 ತುಂಬಿದ್ದರೆ ಮಾತ್ರ ಅವರಿಗೆ ಮತದಾರ ಆಗಲು ಅರ್ಜಿ ಸಲ್ಲಿಕೆಗೆ ಅವಕಾಶವಿತ್ತು. ಜನವರಿ 1ರ ನಂತರ 18 ತುಂಬುವವರು ಮತದಾರರಾಗಲು ಮತ್ತೆ 1 ವರ್ಷ ಕಾಯಬೇಕಿತ್ತು. ಹೀಗಾಗಿ ಈ ಸಮಸ್ಯೆ ತಪ್ಪಿಸಲು ಚುನಾವಣಾ ಆಯೋಗವು 17 ವರ್ಷ ಪೂರೈಸಿದ ಹಾಗೂ ಇನ್ನೂ 18 ತುಂಬದ ಯುವ ಜನರು 17 ವರ್ಷ ಪೂರೈಸಿದ ನಂತರ ಮತದಾರರಾಗಲು ಅರ್ಜಿ ಹಾಕುವ ಅವಕಾಶ ಕಲ್ಪಿಸಲಾಗಿದೆ. ಮುಂದಿನ ವರ್ಷ ಯಾವಾಗ ಅರ್ಜಿದಾರರ ವಯಸ್ಸು 18 ತುಂಬುತ್ತದೋ ಆಗ ಮತದಾರರಾಗಲು ಅವರು ಅರ್ಹರಾಗಲಿದ್ದಾರೆ ಎಂದು ಆಯೋಗ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಇಟಿ ಫಲಿತಾಂಶ ಪ್ರಕಟ- ಈ ಬಾರಿ ಯುವಕರೇ ಮೇಲುಗೈ